ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ಯಾಸ್ ಸಂಪರ್ಕ ಠೇವಣಿ 1,250ಕ್ಕೇರಿಕೆ  Search similar articles
ಸರಕಾರಿ ಸ್ವಾಮ್ಯದ ಇಂಧನ ಸಂಸ್ಥೆಗಳು ಹೊಸ ಅಡುಗೆ ಇಂಧನ ಸಂಪರ್ಕದ ಠೇವಣಿ ಮೊತ್ತವನ್ನು ಸಿಲಿಂಡರೊಂದಕ್ಕೆ 400 ರೂಪಾಯಿ ಏರಿಸಿದ್ದು, ಠೇವಣಿ ಮೊತ್ತ ಇದೀಗ 1,250 ರೂಪಾಯಿಗೇರಿದೆ. ಇಂಧನ ಬೆಲೆ ಹೆಚ್ಚಳದ ಕುರಿತು ಅನಿಶ್ಚಿತತೆ ಮುಂದುವರಿಯುತ್ತಿರುವಂತೆಯೇ ಇಂಧನ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ಹೊಸ ಸಂಪರ್ಕದ ಮರುಪಾವತಿ ಭದ್ರತಾ ಠೇವಣಿಯನ್ನು ಸಿಲಿಂಡರೊಂದಕ್ಕೆ 1,250 ರೂಪಾಯಿಗೇರಿಸಿವೆ. ಈ ಹಿಂದೆ ಈ ಮೊತ್ತ 850 ರೂಪಾಯಿ ಆಗಿತ್ತು. ಈಶಾನ್ಯ ರಾಜ್ಯಗಳಲ್ಲಿ 500 ರೂಪಾಯಿ ಆಗಿದ್ದ ಠೇವಣಿ ಮೊತ್ತವನ್ನು 900 ರೂಪಾಯಿಗೇರಿಸಲಾಗಿದೆ.

ಈ ಬೆಲೆ ಹೆಚ್ಚಳಕ್ಕೆ ಸಂಸ್ಥೆಗಳು ಉಕ್ಕಿನ ಬೆಲೆ ಹೆಚ್ಚಳದ ಕಾರಣ ನೀಡಿವೆ. ಪ್ರಸ್ತುತವಿರುವ ಠೇವಣಿ ಮೊತ್ತವು ಗ್ಯಾಸ್ ಸಿಲಿಂಡರ್ ವೆಚ್ಚವನ್ನು ಭರಿಸಲು ಸಾಕಾಗುವುದಿಲ್ಲ. ಉಕ್ಕಿನ ಬೆಲೆಯಲ್ಲಿ ಹೆಚ್ಚಳವಾಗಿರುವ ಕಾರಣ ಸಿಲಿಂಡರೊಂದಕ್ಕೆ ದೊಡ್ಡ ಮೊತ್ತದ ನಷ್ಟ ಅನುಭವಿಸುತ್ತಿದ್ದೆವು ಎಂದು ಈ ಉದ್ಯಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅದೇ ರೀತಿ ಗ್ಯಾಸ್ ರೆಗ್ಯುಲೇಟರ್‌ ಬೆಲೆಯನ್ನೂ ಏರಿಸಲಾಗಿದೆ. ಇದು 100 ರೂಪಾಯಿಯಿಂದ 150 ರೂಪಾಯಿಗೇರಿದೆ.

ಏತನ್ಮಧ್ಯೆ, ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಕುರಿತ ಅನಿಶ್ಚಿತತೆ ಮುಂದುವರಿದೆ. ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿನ ಅಪರಿಮಿತ ಏರಿಕೆಯು ಇಂಧನ ಬೆಲೆ ಏರಿಕೆಯ ಅನಿವಾರ್ಯತೆ ಉಂಟುಮಾಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಕಾರಣ ಮತ್ತು ಕರ್ನಾಟಕದ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣ ಈ ವಾರದಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆ ಏರಿಸುವಂತಹ ಕಠಿಣ ನಿರ್ಧಾರ ಕೈಗೊಳ್ಳುವ ಸಂಭವ ಕಡಿಮೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ಮತ್ತಷ್ಟು
ಕರ್ನಾಟಕ ಚುನಾವಣಾ ಫಲಿತಾಂಶ ಯುಪಿಎ ನೀತಿಯ ಪ್ರತಿಫಲನ
ರಾಜಸ್ಥಾನ: ಗುಜ್ಜಾರ್ ವಿರುದ್ಧ ಬಿಗಿನಿಲುವು
ಜೈಪುರ ಸ್ಫೋಟ: ಮುಸ್ಲಿಂ ಧರ್ಮಗುರು ಬಂಧನ
ಉಪಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ಮುಖಭಂಗ
ಪಟ್ಟುಬಿಡದ ಗುಜ್ಜಾರರು: ಮುಂದುವರಿದ ಪ್ರತಿಭಟನೆ
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು