ಕಾನೂನನ್ನು ಕೈಗೆತ್ತಿಕೊಂಡಿರುವ ಆಪಾದನೆಯ ಮೇಲೆ ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ವಿರುದ್ಧ ರಾಜಸ್ಥಾನ ಹೈಕೋರ್ಟ್ ನ್ಯಾಯಾಲಯ ನಿಂದನೆ ನೋಟೀಸ್ ಜಾರಿ ಮಾಡಿದೆ.
ಮೇ30 ರಂದು ಭೈಂಸ್ಲಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಮೂರ್ತಿ ಪ್ರೇಮ್ ಶಂಕರ್ ಅಸೋಪ ಅವರು ನಿರ್ದೇಶನ ನೀಡಿದ್ದಾರೆ. ನ್ಯಾಯಾಲಯವು 2007ರ ಸೆಪ್ಟೆಂಬರ್ 10ರಂದು ನೀಡಿರುವ ಆದೇಶವನ್ನು ಭೈಂಸ್ಲಾ ಉಲ್ಲಂಘಿಸಿರುವುದಾಗಿ ಆರೋಪಿಸಿ ರಾಜಸ್ಥಾನ ಸರಕಾರ ದೂರು ಸಲ್ಲಿಸಿತ್ತು.
ಪರಿಶಿಷ್ಟ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಗುಜ್ಜಾರ್ ಸಮುದಾಯವು ನಡೆಸುತ್ತಿರುವ ಚಳುವಳಿಯ ವೇಳೆ ಉಂಟಾಗಿರುವ ಕಾನೂನು ಉಲ್ಲಂಘನೆ ವಿರುದ್ಧ ಯಾವ ಕ್ರಮಗಳನ್ನು ಕೈ ಕೊಂಡಿದ್ದೀರಿ ಎಂಬುದಾಗಿ ಮುಖ್ಯ ಕಾರ್ಯದರ್ಶಿ, ಗೃಹಕಾರ್ಯದರ್ಶಿ ಮತ್ತು ಡಿಜಿಪಿ ಅವರುಗಳಿಂದ ನ್ಯಾಯಾಲಯ ವಿವರಣೆ ಕೋರಿದೆ.
ಪ್ರತಿಭಟನೆ ಮುಂದುವರಿಕೆ ಏತನ್ಮಧ್ಯೆ, ಮುಖ್ಯಮಂತ್ರಿ ವಸುಂಧರಾ ಆವರ ಹೆಚ್ಚುವರಿ ಮೀಸಲಾತಿ ಪ್ರಸ್ತಾಪವನ್ನು ತಳ್ಳಿಹಾಕಿರುವ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದ್ದಾರೆ.
|