ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಬಿಐಯನ್ನು ಒಕ್ಕೂಟ ಸಂಸ್ಥೆಯಾಗಿಸಲು ಸಲಹೆ  Search similar articles
ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಗೆ, ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ಸ್ವತಃ ತನಿಖೆ ನಡೆಸಲು ಅನುಕೂಲವಾಗುವಂತೆ ಬೇಹುಗಾರಿಕೆ ಸೇರಿದಂತೆ ವಿಶೇಷ ಅಧಿಕಾರ ನೀಡಬೇಕೆಂದು ಕಾನೂನು ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥರು ಒಲವು ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆ ದಾಳಿಗಳನ್ನು ತಪ್ಪಿಸುವ ಉದ್ದೇಶದ ಹಿನ್ನೆಲೆಯಲ್ಲಿ, ಒಕ್ಕೂಟ ಅಪರಾಧ ತಡೆ ಸಂಸ್ಥೆ ಸ್ಥಾಪನೆ ಅಥವಾ ಸಿಬಿಐಯನ್ನು ಕೇಂದ್ರೀಯ ಬೇಹುಗಾರಿಕೆ ಮತ್ತು ತನಿಖಾ ದಳವಾಗಿ ಪುನಾರಚನೆಯ ಪ್ರಸ್ತಾಪ ಹೊಂದಿರುವುದಾಗಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಸುದರ್ಶನ ನಾಚಿಯಪ್ಪನ್ ಹೇಳಿದ್ದಾರೆ.

ವಿಶೇಷ ಅಧಿಕಾರಗಳು ಮತ್ತು ಪೂರ್ಣಸ್ವರೂಪದ ಬೇಹುಗಾರಿಕೆ ಅಧಿಕಾರವನ್ನು ಸಿಬಿಐಗೆ ನೀಡುವುದರಿಂದ ಭಯೋತ್ಪಾದನೆ ಪ್ರಕರಣಗಳಲ್ಲಿ ರಾಜ್ಯಪೊಲೀಸರಿಂದ ಕೇಂದ್ರೀಯ ಸಂಸ್ಥೆಗಳಿಗೆ ತನಿಖೆಯನ್ನು ವರ್ಗಾಯಿಸುವ ನಿರ್ಣಾಯಕ ಸಮಯ ಉಳಿಯುತ್ತದೆ ಎಂದು ಅವರು ಹೇಳಿದರು. ಪ್ರಸಕ್ತ ರಾಜ್ಯ ಸರ್ಕಾರಗಳು ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ ಸಿಬಿಐ ತನಿಖೆಯನ್ನು ಕೈಗೆತ್ತಿಕೊಳ್ಳುವ ಅವಕಾಶ ಇದೆ.

ಭಯೋತ್ಪಾದನೆ ದಾಳಿಗಳನ್ನು ನಿಭಾಯಿಸಲು ಫೆಡರಲ್ ಅಪರಾಧ ಏಜನ್ಸಿಗಳನ್ನು ಸೃಷ್ಟಿಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಚಿಯಪ್ಪನ್ ಪ್ರತಿಕ್ರಿಯೆ ಹೊರಬಿದ್ದಿರುವುದು ಮಹತ್ವ ಪಡೆದಿದೆ. ಸಮಿತಿಯು ರಾಜ್ಯಸಭೆಗೆ ಮಂಡಿಸಿರುವ ತನ್ನ 24ನೇ ವರದಿಯಲ್ಲಿ ಸಿಬಿಐಯನ್ನು ಪುನರ್ರಚಿಸಿ ಅಮೆರಿಕದ ಎಫ್‌ಬಿಐ ಏಜನ್ಸಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾಪ ಇರಿಸಿದೆ.
ಮತ್ತಷ್ಟು
ಉದ್ಯೋಗಿಗೆ ಅಸಮರ್ಥನೀಯ ಶಿಕ್ಷೆ ಸಲ್ಲ: ಸು.ಕೋ
ಮಹಿಳಾ ಮಸೂದೆ ಪ್ರಥಮ ಸಭೆಯಲ್ಲಿ ಬಿರುಗಾಳಿ
ನೆಹರು 44ನೆ ಪುಣ್ಯ ತಿಥಿ; ರಾಷ್ಟ್ರದ ನಮನ
ಗುಜ್ಜಾರ್: ಭೈಂಸ್ಲಾಗೆ ಕಂಟೆಪ್ಟ್ ನೋಟೀಸ್
ಯುಪಿ: ನೀರಿನಲ್ಲಿ ಮುಳುಗಿ 5 ಮಕ್ಕಳ ಸಾವು
ಗುಜ್ಜಾರ್‌: ಶೇ.6 ಮೀಸಲಾತಿ ಕೋರಿ ಪ್ರಧಾನಿಗೆ ರಾಜೇ ಪತ್ರ