ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸಂಪುಟವು ಮಂಗಳವಾರ ರಾತ್ರಿ ನಿರ್ಣಯ ತೆಗೆದುಕೊಂಡಿದೆ. ಇದರೊಂದಿಗೆ ಆರು ತಿಂಗಳ ಅನಿಶ್ಚಿತತೆಗೆ ತೆರೆಬಿದ್ದಂತಾಗಿದ್ದು, ಜನಾದೇಶಿತ ಸರಕಾರದ ಸ್ಥಾಪನೆಯ ಹಾದಿ ಸುಗಮವಾದಂತಾಗಿದೆ.
ಕರ್ನಾಟಕದಲ್ಲಿ ಚುನಾವಣೆಗಳು ನಡೆದು ಬಿಜೆಪಿಯು 110 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಆರು ಪಕ್ಷೇತರರ ಬೆಂಬಲದೊಂದಿಗೆ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಈ ಕ್ರಮ ಕೈಗೊಂಡಿದೆ.
ಈ ಮೂಲಕ, 13ನೇ ವಿಧಾನಸಭೆಯಲ್ಲಿ ಶುಕ್ರವಾರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಾದಿ ಸುಗಮವಾದಂತಾಗಿದೆ.
|