ಬಾಲಿವುಡ್ ನಟ ಸಂಜಯ್ ದತ್ ಹಾಗೂ ಅವರ ಗೆಳತಿ ಮಾನ್ಯತಾ ಅವರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ, ಸಿಟಿ ಮ್ಯಾಜಿಸ್ಟ್ರೇಟ್ ಒಬ್ಬರು ಪಾಸು ಮಾಡಿದ್ದ ಆದೇಶವನ್ನು ಸೆಷನ್ಸ್ ಕೋರ್ಟ್ ತಳ್ಳಿಹಾಕಿದೆ. ಇದರಿಂದಾಗಿ ಸಂಜಯ್ ದತ್‌ಗೆ ತಾತ್ಕಾಲಿಕ ಉಪಶಮನ ಲಭಿಸಿದಂತಾಗಿದೆ.
ಮಾನ್ಯತಾ ಅವರು ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಎಸ್.ಎನ್. ಸರ್ದೇಸಾಯ್ ಅವರು, ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನಡೆಸಿರುವ ಪ್ರಕ್ರಿಯೆ ಸಿಂಧುವಲ್ಲ ಎಂಬ ಆದೇಶ ನೀಡಿದ್ದಾರೆ.
ಮಾನ್ಯತಾ ಅವರ ಮೊದಲ ಪತಿ ಮಹ್ರಾಜ್-ಉಲ್-ರೆಹ್ಮಾನ್ ಅವರು ಹೂಡಿರುವ ಮೊಕದ್ದಮೆಯ ವಿಚಾರಣೆಯ ವೇಳೆಗೆ, ದತ್ ಹಾಗೂ ಮಾನ್ಯತಾ ನ್ಯಾಯಾಲಯದಲ್ಲಿ ಹಾಜರಾಗಬೇಕು ಎಂಬ ಆದೇಶ ಹೊರಡಿಸಿದ್ದರು.
ಮಾನ್ಯತಾ ತನಗೆ ವಿಚ್ಛೇದನ ನೀಡಿಲ್ಲದ ಕಾರಣ ಮಾನ್ಯತಾ ಹಾಗೂ ಸಂಜತ್ ದತ್ ಅವರ ವಿವಾಹ ಸಿಂಧುವಲ್ಲ ಎಂದು ರೆಹ್ಮಾನ್ ಮೊಕದ್ದಮೆ ಹೂಡಿದ್ದಾರೆ.
|