ಇಲ್ಲಿನ ಟಾಟಾ ಮೋಟಾರ್ಸ್ ಸ್ಥಾವರದಲ್ಲಿ ಉಂಟಾದ ಅನಿಲ ಸೋರಿಕೆಯಿಂದಾಗಿ ಮೂವರು ಪತ್ರಿಕಾ ಛಾಯಾಚಿತ್ರಗ್ರಾಹಕರೂ ಸೇರಿದಂತೆ ಕನಿಷ್ಠ 100 ಮಂದಿಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.
ನೀರು ಶೋಧಕ ಸ್ಥಾವರದಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿರುವ ಕಾರಣ ಉಸಿರಾಟದ ತೊಂದರೆ ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪಶ್ಚಿಮ ಸಿಂಗಬಮ್‌ನ ಜಿಲ್ಲಾಧಿಕಾರಿ ರವೀಂದ್ರ ಅಗರ್ವಾಲ್ ಹೇಳಿದ್ದಾರೆ.
ಅಪರಾಹ್ನದ ವೇಳೆ ಶೋಧಕ ಸ್ಥಾವರದಲ್ಲಿ ಕ್ಲೋರಿನ್ ಸೋರಿಕೆಯುಂಟಾಗಿದೆ ಎಂದು ಟಾಟಾಮೋಟಾರ್ಸ್‌ನ ಪ್ರಧಾನ ವ್ಯವಸ್ಥಾಪಕ ಕ್ಯಾಪ್ಟನ್ ಪಿ.ಜೆ.ಸಿಂಗ್ ಹೇಳಿದ್ದಾರೆ.
|