ಪರಿಶಿಷ್ಟ ಪಂಗಡದ ಸ್ಥಾನಮಾನ ಕೋರಿ ರಾಜಸ್ಥಾನದಲ್ಲಿ ಗುಜ್ಜಾರ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಆರನೆ ದಿನಕ್ಕೆ ಕಾಲಿಟ್ಟಿದ್ದು, ಮೀಸಲಾತಿಯನ್ನು ಕೇಂದ್ರ ಮಟ್ಟದಲ್ಲಿ ಮಾಡಬೇಕಾಗಿದೆ ಎಂದು ಹೇಳಿರುವ ರಾಜ್ಯ ಸರಕಾರ, ಸಮುದಾಯದ ಸದಸ್ಯರು ತಮ್ಮ 'ವಿವೇಕವನ್ನು' ಬಳಸಬೇಕು ಎಂದು ಹೇಳಿದೆ.
ಮೀಸಲಾತಿಯ ಎಲ್ಲಾ ಪ್ರಕ್ರಿಯೆಗಳನ್ನು ಕೇಂದ್ರ ಸರಕಾರವೇ ಈಗ ಮಾಡುತ್ತಿದೆ. ಗುಜ್ಜಾರ್ ಸಮುದಾಯವು ತಮ್ಮ ಪ್ರಯತ್ನವನ್ನು ಕೇಂದ್ರದ ಬಳಿಗೊಯ್ಯಬೇಕು ಮತ್ತು ತಮ್ಮ ವಿವೇಕವನ್ನು ಬಳಸಬೇಕು ಎಂದು ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧ್ಯಾ ಹೇಳಿದ್ದಾರೆ.
ಹಿಂಸಾಚಾರವನ್ನು ನಿಲ್ಲಿಸಿ, ಮೀಸಲಾತಿ ಪ್ರಕ್ರಿಯೆಯನ್ನು ಅರಿತುಕೊಂಡು, ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಸಮುದಾಯಕ್ಕೆ ಕರೆನೀಡಿದ್ದಾರೆ.
|