ಜೈಪುರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಒಬ್ಬ ಮದ್ರಸಾ ಶಿಕ್ಷಕ ಹಕಿಮುದ್ದೀನ್ ಮತ್ತು ಟೆಲಿಫೋನ್ ಬೂತ್ ಮಾಲಕ ಕಮಿಲ್ ಎಂಬಾತನನ್ನು ಕಳೆದ ರಾತ್ರಿ ಬಂಧಿಸಲಾಗಿದೆ.
ಮಥುರಾ ಜಿಲ್ಲೆಯ ನಾಗ್ಲಾ ಇಮಾಮ್ ಖಾನ್ ಗ್ರಾಮದ ಹಕಿಮುದ್ದಿನ್ ಕಳೆದೆರಡು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ. 15ರ ಹರೆಯದ ಕಮಿಲ್ ಇಲ್ಲಿನ ಈದ್ಗಾ ಕಾಲನಿಯ ಕುಮೆರ್ ಗೇಟ್‌ನಲ್ಲಿ ಟೆಲಿಫೋನ್ ಬೂತ್ ಹೊಂದಿದ್ದ.
ಕಳೆದ ಶುಕ್ರವಾರ ಬಂಧನಕ್ಕೀಡಾಗಿರುವ ಇಮಾಮ್, ಮೊಹಮ್ಮದ್ ಇಲ್ಯಾಸ್ ನೀಡಿದ ಮಾಹಿತಿಯನ್ವಯ ಈ ಇಬ್ಬರನ್ನು ಬಂಧಿಸಲಾಗಿದೆ.
ಹಕಿಮುದ್ದಿನ್ ಮತ್ತು ಕಮಿಲ್ ಅವರುಗಳನ್ನು ತನಿಖೆಗಾಗಿ ಜೈಪುರಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
|