2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್‌ನಾದ್ಯಂತ ಹರಡಿದ ಕೋಮು ಗಲಭೆ ದಳ್ಳುರಿಯ ವಿಚಾರಣೆ ನಡೆಸುತ್ತಿರುವ ಅಹ್ಮದಾಬಾದ್‍ನ ತ್ವರಿತ ವಿಚಾರಣಾ ನ್ಯಾಯಾಲಯವು ಬಾಪು ನಗರದಲ್ಲಿ ನಡೆದ ಕೊಮು ಗಲಬೆಯ 21 ಆರೋಪಿತರನ್ನು ನಿರ್ದೋಷಿಗಳು ಎಂದು ಖುಲಾಸೆ ಮಾಡಿದೆ.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಆರ್. ಆರ್ ಭಟ್ ಅವರು ಸಾಕ್ಷಿಗಳ ಪ್ರತಿಕೂಲ ಹೇಳಿಕೆ ಮತ್ತು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇರುವ ದ್ವಂದ್ವತೆಯ ಕಾರಣ ನೀಡಿ ಆರೋಪಿತರನ್ನು ಖುಲಾಗೊಳಿಸಲಾಗಿದೆ ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು.
ಸಬರಮತಿ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಎರಡು ದಿನಗಳ ನಂತರ ಅಂದರೆ ಮಾರ್ಚ್ 1, 2002ರಂದು ಬಾಪು ನಗರ ಪ್ರದೇಶದಲ್ಲಿ ಎರಡು ಕೊಮುಗಳ ನಡುವೆ ಘರ್ಷಣೆ ಉಂಟಾಗಿತ್ತು. ಘರ್ಷಣೆಯಲ್ಲಿ ಎರಡು ಕೋಮಿಗೆ ಸೇರಿದ ನಾಗರಿಕರು ಸಾವನ್ನಪ್ಪಿದ್ದು ಅಲ್ಲದೇ ಹಲವರು ಗಂಭೀರವಾಗಿ ಗಾಯಗೊಂಡಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
|