ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ರಾಜಸ್ಥಾನದಲ್ಲಿ ಗುಜ್ಜಾರ್ ಸಮುದಾಯ ನಡೆಸುತ್ತಿದ್ದ ಚಳುವಳಿ ರಾಷ್ಟ್ರದ ರಾಜಾಧಾನಿಯನ್ನು ವ್ಯಾಪಿಸಿದ್ದು, ಪ್ರತಿಭಟನಾಕಾರರು ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯುಂಟುಮಾಡಿದ್ದಾರೆ.
ಎನ್‌ಸಿಆರ್ ರಾಸ್ತಾ ರೋಕೊ ಚಳುವಳಿಯಂಗವಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ಸಂಭಾವ್ಯ ಅನಾಹುತವನ್ನು ತಡೆಯಲು 35 ಸಾವಿರಕ್ಕೂ ಅಧಿಕ ಪೊಲೀಸರನ್ನು ರಾಜಧಾನಿಯುದ್ದಕ್ಕೂ ನಿಯೋಜಿಸಲಾಗಿದೆ.
ಪಶ್ಚಿಮ ದೆಹಲಿಯ ಮಯೂರ್ ವಿಹಾರ್‌ನಲ್ಲಿ ಗುರುವಾರ ಮುಂಜಾನೆ ಜಾಥಾ ನಡೆಸಿದ್ದು, ಸಾರಿಗೆ ಸಂಚಾರಕ್ಕೆ ತಡೆಯೊಡ್ಡಿದರು. ಮೆಹ್ರೌಲಿ- ಗುರ್‌ಗಾವೊನ್ ರಸ್ತೆ, ನೋಯ್ಡಾ ಎಕ್ಸ್‌ಪ್ರೆಸ್ ಹೈವೇ ಮತ್ತು ಎನ್ಎಚ್-24 ಹೆದ್ದಾರಿಗಳನ್ನು ತಡೆದರು. ಇದಲ್ಲದೆ, ಗಜಿಯಾಬಾದಿಗೆ ತಾಗಿಕೊಂಡಿರುವ ಲೋನಿ ಪ್ರದೇಶದಲ್ಲಿ ಪ್ಯಾಸೆಂಜರ್ ರೈಲನ್ನು ತಡೆದರು.
|