ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ ಪ್ರಗತಿಯಲ್ಲಿದೆ: ಕರುಣಾನಿಧಿ  Search similar articles
PTI
ಎಐಎಡಿಎಂಕೆ ಸೇರಿದಂತೆ ಕೆಲವು ವಿರೋಧಪಕ್ಷಗಳು ಹೇಳಿರುವಂತೆ ಹೊಗೇನಕಲ್ ನೀರಾವರಿ ಯೋಜನೆಯನ್ನು 'ಶೀತಲ ಪೆಟ್ಟಿಗೆಯಲ್ಲಿ' ಇಟ್ಟಿಲ್ಲ ಎಂದು ತಮಿಳ್ನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಬುಧವಾರ ಹೇಳಿದ್ದಾರೆ. ಯೋಜನೆಯ ಆರಂಭದ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ವೇಳಾಪಟ್ಟಿಯ ಪ್ರಕಾರ ಯೋಜನಾ ನಿರ್ವಹಣಾ ಸಲಹೆಯನ್ನು ನಾವು ಜುಲೈ 2008ರ ವೇಳೆಗೆ ಅಂತ್ಯಗೊಳಿಸಬೇಕಿದೆ. ಫೆಬ್ರವರಿಯಲ್ಲೇ ನಾವು ಟೆಂಡರ್‌ಗಳನ್ನು ಕರೆದಿದ್ದೇವೆ ಮತ್ತು ಟೆಂಡರ್‌ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಮಾರ್ಚ್ ಆಗಿತ್ತು" ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯೋಜನೆಯು ವೇಳಾಪಟ್ಟಿಯಂತೆ ಮುಂದುವರಿಯಲಿರುವ ಕಾರಣ ಕೆಲವರು ಒತ್ತಾಯಿಸಿರುವಂತೆ ಕೇಂದ್ರ ಅಥವಾ ಕರ್ನಾಟಕಕ್ಕೆ ಪತ್ರ ಬರೆಯುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಹೊಗೇನಕಲ್ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಗಲಭೆಗಳು ಸಂಭವಿಸಿರುವುದಕ್ಕಾಗಿ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು ಅಷ್ಟೆ ಎಂದು ನುಡಿದಿರುವ ಕರುಣಾನಿಧಿ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್‌ಅನ್ನು 2009ರ ಮಾರ್ಚ್ ಒಳಗಾಗಿ ಅಂತಿಮಗೊಳಿಸಲಾಗುವುದು, ಮತ್ತು ಈಗಾಗಲೇ ನಿಗದಿ ಪಡಿಸಿರುವಂತೆ 2012ರ ವೇಳೆಗೆ ಹೊಗೇನಕಲ್ ಯೋಜನೆ ಪರಿಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ರಾಜಧಾನಿಗೆ ವ್ಯಾಪಿಸಿದ ಗುಜ್ಜಾರ್ ಚಳವಳಿ
ಗುಜರಾತ್ ಕೋಮು ಗಲಭೆ: 21 ಆರೋಪಿಗಳ ಖುಲಾಸೆ
ಜೈಪುರ ಸ್ಫೋಟ: ಮತ್ತೆರಡು ಬಂಧನ
ಗುಜ್ಜಾರ್: ಕೇಂದ್ರದ ಅಂಗಳದಲ್ಲಿ ಚೆಂಡು
ಟಾಟಾ ಮೋಟಾರ್ಸ್ ಸ್ಥಾವರದಲ್ಲಿ ಅನಿಲ ಸೋರಿಕೆ
ದತ್, ಮಾನ್ಯತಾಗೆ ತಾತ್ಕಾಲಿಕ ಉಪಶಮನ