ಪನಲೂರು-ಪನಲೂರಿನಲ್ಲಿ ಒಂದು ಮದುವೆ ಇತ್ತೀಚೆಗೆ ಆಯಿತು. ಅದು ಜಾತಿ,ಧರ್ಮ ಬಿಟ್ಟವರದು. ಬಿಟ್ಟವರು ಚೆ ಗುವೆರಾ ಮತ್ತು ಶೈನ್ ಎಂಬ ಯುವತಿ ಅಷ್ಟೇ ಅಲ್ಲ. ಅವರಿಬ್ಬರನ್ನು ಇಲ್ಲಿಯವರೆಗೂ ಬೆಳೆಸಿದವರೂ ಜಾತಿ ಬಿಟ್ಟವರು.ಇದೇನು ಜಾತಿ ಬಿಟ್ಟವರು ಎಂದು ಹಲುಬುತ್ತಿದ್ದಾರೆ ಎಂದುಕೊಳ್ಳಬೇಡಿ.
ಚಿ ಗುವೆರಾ ಎನ್ನುವ ಹೆಸರೇ ಕ್ರಾಂತಿಕಾರಿ ಮನೋಭಾವದ ಯುವಕರ ರಕ್ತದ ಬಿಸಿ ಎರುವಂತೆ ಮಾಡುತ್ತದೆ. ಲ್ಯಾಟಿನ್ ಮತ್ತು ಕ್ಯೂಬಾಗಳಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದ ಧೀಮಂತ ಕ್ರಾಂತಿಕಾರಿ. ಇಂತಹ ಕ್ರಾಂತಿಕಾರಿ ಹೆಸರು ಇಟ್ಟುಕೊಂಡವ ಎಂದಾದರೂ ಆರತಕ್ಷತೆ ಆದೂ ಇದು ಎಂದು ಹತ್ತಿರ ಸುಳಿಯಬಹುದೇ ಸಾಧ್ಯವಿಲ್ಲದ ಮಾತು. ಹುಟ್ಟಿಸಿ ಬೆಳೆಸಿದ ವಧು-ವರರ ತಂದೆ ತಾಯಿಗಳಿಬ್ಬರೂ ಜಾತಿ ವ್ಯವಸ್ಥೆಯನ್ನು ದಿಕ್ಕರಿಸಿ ನಿಂತವರು.
ಹಾಗಾಗಿ ಮದುವೆಯಲ್ಲಿ ಬದಲಾಯಿಸಿಕೊಂಡ ಹಾರಗಳು ಮತ್ತು ಸಬ್ ರಜಿಸ್ಟ್ರಾರ್ ಆಫೀಸ್ ಕಚೇರಿಯ ನೋಂದಣಿ ಪುಸ್ತಕಕ್ಕೆ ಹಾಕಿದ ಒಂದು ಸಹಿ ನೆಪ ಮಾತ್ರ.
ಚಿ ಮತ್ತು ಶೈನ್ ತಂದೆ ತಾಯಿಗಳಿಬ್ಬರೂ ಕಮ್ಯೂನಿಸ್ಟ ಸಿದ್ಧಾಂತವನ್ನು ಅಪ್ಪಿಕೊಂಡು, ಸಮಾನತೆಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವವರು. ಇಂತಹ ಕ್ರಾಂತಿಕಾರಿಗಳ ಮಕ್ಕಳಿಗೆ ಅವರು ಶೋಧಿಸುತ್ತಿದ್ದುದು ಅನುರೂಪ ವಧು ವರನನ್ನು.
ಆಗಲೇ ಶೈನ್‌ಗೆ ಸಿಕ್ಕಿದ್ದು ಚಿ ಎಂಬ ವರ. ಚಿ ಗುವೆರಾ ತಂದೆ ಹನೀಫಾ ದುಬೈ ಮೂಲದ ಕಂಪನಿಯೊಂದರಲ್ಲಿ ಅನಿಮೇಟರ್ ಆಗಿ ಕೆಲಸ ಮಾಡುತ್ತಿದ್ದು. ಬಾಲ್ಯದಿಂದಲೂ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚಿ ಗುವೆರಾ ಮತ್ತು ವಿಯಟ್ನಾಮ್ ನಾಯಕ ಹೊ ಚಿ ಮಿನ್ಹ್ ಅವರುಗಳ ಕಟ್ಟಾ ಅನುಯಾಯಿ. ಮದುವೆಯಾದ ನಂತರ ಹುಟ್ಟಿದ ಮಗನಿಗೆ ಹೆಸರಿಟ್ಟಿದ್ದು ತನ್ನ ಕ್ರಾಂತಿ ದೇವತೆ ಗುವೆರಾ ಹೆಸರನ್ನು.
ಶೈನ್ ಕುಟುಂಬದ ಹಿನ್ನಲೆಯು ಇದಕ್ಕೆ ಹೊರತಾಗಿಲ್ಲ. ತಂದೆ ಫಸಲುದ್ದೀನ್ ಮುಸ್ಲಿಂ ಜನಾಂಗಕ್ಕೆ ಸೇರಿದವನು ಆಗಿದ್ದರೆ. ತಾಯಿ ಅಗ್ನಾಸ್ ಕ್ರಿಶ್ಚಿಯನ್ ಇವರಿಬ್ಬರೂ ಮದುವೆಯಾದ ನಂತರ ವಿಚಾರ ಮಾಡಿದ್ದು ಹುಟ್ಟಿದ ಮಗಳ ಹೆಸರಿನಲ್ಲಿ ಜಾತಿಯ ಕಳಂಕ ಇರಬಾರದು ಎಂದು ಆದ್ದರಿಂದಲೇ ಶೈನ್ ಎಂದು ಹೆಸರಿಟ್ಟರು. ಇಂಗ್ಲಿಷ್‌ನಲ್ಲಿ ಶೈನ್ ಎಂದರೆ ಬೆಳಗುವುದು, ಪ್ರಕಾಶಿಸುವುದು ಆಗುತ್ತದೆ. ಹಾಗಿದ್ದರೆ ನಮ್ಮ ಶೈನ್, ಗುವೆರಾ ಬಾಳು ಬೆಳಗುತ್ತಾಳೊ ಇಲ್ಲವೋ ನೋಡಬೇಕು.
ಫಸಲುದ್ದೀನ್ ಮತ್ತು ಹನೀಫಾ ಕುಟುಂಬಗಳು ಶಾಲೆಯಲ್ಲಿ ತಮ್ಮ ಮಕ್ಕಳು ಹೆಸರು ನೊಂದಾಯಿಸುವ ಸಂದರ್ಭದಲ್ಲಿ ಜಾತಿ ಮತ್ತು ಧರ್ಮದ ಕಾಲಂಗಳನ್ನು ಭರ್ತಿಯೇ ಮಾಡಿಲ್ಲ. ಹೀಗಾಗಿ ಜಾತಿ ಇಲ್ಲದ ಮಾನವ ಜಾತಿಯವರು ಇವರು ಎಂದು ಘಂಟಾ ಘೋಷವಾಗಿ ಹೇಳಬಹುದು.
|