ಜೈಪುರ: ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜಾರ್ ಸಮುದಾಯ ನಡೆಸಿರುವ ಪ್ರತಿಭಟನೆ ವೇಳೆ ಸಂಭವಿಸಿರುವ ಘರ್ಷಣೆಯನ್ನು ತಡೆಯಲು ಪೊಲೀಸರು ಗೋಲೀಬಾರ್ ನಡೆಸಿದ್ದು, ಈ ವೇಳೆ ಇಬ್ಬರು ಮೃತರಾಗಿದ್ದು, ಪೊಲೀಸರಿಬ್ಬರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ಗುರುವಾರದಿಂದಲೇ ಪ್ರತಿಭಟನೆ ನಿರತರಾಗಿದ್ದ ಚಳುವಳಿಕಾರರು, ಹಸಾಲಿ ದರ್ರಾ ಪ್ರದೇಶದಲ್ಲಿ ರಸ್ತೆತಡೆಯುಂಟುಮಾಡಿದ್ದು, ಪೊಲೀಸರ ಮೇಲೆ ಕಲ್ಲೆಸೆದರು ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ.
ಗುಂಪುಚದುರಿಸಲು ಪೊಲೀಸರು ಮೊದಲಿಗೆ ಲಾಠಿಚಾರ್ಜ್ ನಡೆಸಿದ್ದು, ಬಳಿಕ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದಾಗಲೂ ಪರಿಣಾಮ ಬೀರದಾಗ ಅವರು ಲಾಠಿಚಾರ್ಜ್ ನಡೆಸಿದರು.
ಮೃತರನ್ನು ಕನಹ್ಯಾ ಲಾಲ್ ಮತ್ತು ರಾಧಿಶ್ಯಾಮ್ ಎಂದು ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಧಾನಿ, ಸೋನಿಯಾ ಬಳಿಗೆ ಪಾಸ್ವಾನ್ ಗುಜ್ಜಾರ್ ಪ್ರತಿಭಟನೆಯನ್ನು ಸೂಕ್ತರೀತಿಯಲ್ಲಿ ನಿರ್ವಹಿಸಲು ರಾಜಸ್ಥಾನದ ಬಿಜೆಪಿ ಸರಕಾರ ಸೋತಿದೆ ಎಂದು ಆಪಾದಿಸಿರುವ ಲೋಕ್ ಜನಶಕ್ತಿ ಪಕ್ಷದ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ಈ ವಿಚಾರವನ್ನು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಬಳಿಗೆ ಒಯ್ಯುವುದಾಗಿ ಹೇಳಿದ್ದಾರೆ.
|