ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ  Search similar articles
ಪಾಟ್ನಾ : ಬಿಹಾರ್‌ನ ಇನ್ನೊವಾಟಿವ್ ತರಬೇತಿ ಕೇಂದ್ರದಲ್ಲಿ ಸೂಪರ್‌ 30ಯಲ್ಲಿ 30 ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆದಿದ್ದು,ತೀವ್ರ ಸ್ಪರ್ಧಾತ್ಮಕವಾದ ಇಂಡಿಯನ್ ಇನ್‌ಸ್ಟೂಟ್‌ ಆಫ್ ಟೆಕ್ನಾಲಾಜಿಯ ಜಾಯಿಂಟ್ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100ರ ಫಲಿತಾಂಶವನ್ನು ಪಡೆದಿದೆ ಎಂದು ತರಬೇತಿ ಕೇಂದ್ರ ಘೋಷಿಸಿದೆ.

ಈ ದಿನ ನಮಗೆ ಅತ್ಯಂತ ಸಂತಸ ತಂದ ದಿನವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಶೇ100ರ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಕೊನೆಗೂ ಪ್ರಸಕ್ತ ವರ್ಷ ನಾವು ಯಶಸ್ವಿಯಾಗಿದ್ದೇವೆ. ಸಂಭ್ರಮಾಚರಣೆಯ ಮೂಡ್‌ನಲ್ಲಿದ್ದೇವೆ ಎಂದು ಸೂಪರ್‌ 30 ಯ ನಿರ್ದೇಶಕ ಆನಂದ್‌ ಕುಮಾರ್ ತಿಳಿಸಿದ್ದಾರೆ.

ಪ್ರತಿ ವರ್ಷ ಸೂಪರ್‌ 30ಯಲ್ಲಿ 30 ಐಐಟಿ ಅಕಾಂಕ್ಷಿಗಳಾದ ಬಡ ವಿದ್ಯಾರ್ಥಿಗಳ ಗುಂಪನ್ನು ಗುರುತಿಸಿ ಅಹಾರ ವಸತಿಯೊಂದಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಹಾರ್‌ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಭಯಾನಂದ್ ತರಬೇತಿ ಕೇಂದ್ರದಲ್ಲಿ ಭೌತಶಾಸ್ತ್ರದ ತರಬೇತಿಯನ್ನು ನೀಡುತ್ತಿದ್ದು, ಪ್ರಸಕ್ತ ವರ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸೇರಿದಂತೆ 30 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಹಿಂದುಳಿದ ವರ್ಗ ಹಾಗೂ ಅತಿ ಹಿಂದೂಳಿದ ವರ್ಗ ಮತ್ತು ದಲಿತ ವಿದ್ಯಾರ್ಥಿಗಳು ಸೂಪರ್‌ 30 ಮೂಲಕ ಐಐಟಿ -ಜೆಇಇಗೆ ಸೇರ್ಪಡೆಯಾಗಿದ್ದರು. ಆದರೆ ಈ ವರ್ಷ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಐಐಟಿ -ಜೆಇಇಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವಿವರಣೆ ನೀಡಿದ್ದಾರೆ.

ಸೂಪರ್‌ 30 ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಕಠಿಣ ಪರಿಶ್ರಮ ಹಾಗೂ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. 2007ರಲ್ಲಿ 28 ವಿದ್ಯಾರ್ಥಿಗಳು ಐಐಟಿ -ಜೆಇಇಗೆ ಸೇರ್ಪಡೆಯಾಗಿದ್ದು ಉಳಿದ ಇಬ್ಬರು ವಿದ್ಯಾರ್ಥಿಗಳು ಪೂರ್ವಸಿದ್ದತೆಗಾಗಿ ಆಯ್ಕೆಯಾಗಿದ್ದರು.2006ರ ಸೂಪರ್ 30ಯಲ್ಲಿ 28 ವಿದ್ಯಾರ್ಥಿಗಳು ಐಐಟಿ -ಜೆಇಇಗೆ ಸೇರ್ಪಡೆಯಾಗಿದ್ದರು.

ವಿದ್ಯಾರ್ಥಿಗಳಿಗ ಅಹಾರ ಸೇವಿಸುವಾಗ,ಮಲಗುವಾಗ, ನಡೆಯುವಾಗ ಮಾತನಾಡುವಾಗ ಕೇವಲ ಐಐಟಿ ಬಗ್ಗೆ ಮಾತನಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಶೇ 100ರ ಫಲಿಂತಾಶದ ಬಗ್ಗೆ ಭರವಸೆ ಇತ್ತು ಎಂದು ಹೇಳಿದ್ದಾರೆ.

ಸೂಪರ್‌30ಯ ನಿರ್ದೇಶಕ ಆನಂದ್‌ ಕುಮಾರ್ ರಾಮಾನುಜಂ ಸ್ಕೂಲ್ ಆಫ್ ಮೆಥೆಮೆಟಿಕ್ಸ್ ಕೂಡಾ ನಡೆಸುತ್ತಿದ್ದು,ಸ್ಕೂಲ್ ಆಫ್ ಮೆಥೆಮೆಟಿಕ್ಸ್ ಶುಲ್ಕ ದಿಂದ ಬಂದ ಆದಾಯದಿಂದ ಸೂಪರ್‌ 30ಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಸೂಪರ್‌30 ಕಳೆದ ಐದು ವರ್ಷಗಳಿಂದ ಆರಂಭವಾಗಿದ್ದು, ಆರಂಭದ 2003ರಲ್ಲಿ 18 ವಿದ್ಯಾರ್ಥಿಗಳು ಐಐಟಿ -ಜೆಇಇಗೆ ಸೇರ್ಪಡೆಯಾಗಿದ್ದು 2004ರಲ್ಲಿ 22 ಮತ್ತು 2005ರಲ್ಲಿ 26 ವಿದ್ಯಾರ್ಥಿಗಳು ಐಐಟಿ -ಜೆಇಇಗೆ ಸೇರ್ಪಡೆಯಾಗಿದ್ದರು ಎಂದು ತಿಳಿಸಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡಿ ದೇಶದ ಉನ್ನತ ಇಂಜಿನಿಯರಿಂಗ್ ಕಾಲೇಜ್‌‌ಗಳಿಗೆ ಯಶಸ್ವಿಯಾಗಿ ದಾಖಲಾತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಜಪಾನ್‌ ದೇಶದ ನಟಿ, ಸೌಂದರ್ಯ ರಾಣಿ ಪಟ್ಟ ಅಲಂಕರಿಸಿದ ನೊರಿಕಾ ಫುಜಿವಾರಾ ಈ ಕುರಿತಂತೆ ಸಾಕ್ಷ್ಯಾ ಚಿತ್ರವನ್ನು ನಿರ್ಮಿಸಿದ್ದಾರೆ.
ಮತ್ತಷ್ಟು
ಕತಾರ ಕೊಲೆ: ವಿಕಾಸ್, ವಿಶಾಲ್‌ಗೆ ಜೀವಾವಧಿ
ಗೋಲೀಬಾರ್‌ಗೆ ಮತ್ತೆರಡು ಗುಜ್ಜಾರ್ ಬಲಿ
ಜಾತಿಗೆ ಅತೀತವಾದ 'ಗುವೆರಾ' ವಿವಾಹ
ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತಕ್ಕೆ ಪ್ರತಿಭಾ ಸಹಿ
ಯಡಿಯೂರಪ್ಪ ಇಂದು ಪ್ರಮಾಣವಚನ ಸ್ವೀಕಾರ
ಗುಜ್ಜಾರ್: ಹೊಸ ಮಾತುಕತೆಗೆ ಮುಂದಾದ ವಸುಂಧರಾ