ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಶಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ  Search similar articles
ಅರುಶಿ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯ ಮೂಲಕ ನಡೆಸಬೇಕು ಎಂದು ಉತ್ತರ ಪ್ರದೇಶ ಸರಕಾರಕ್ಕೆ ಕೇಂದ್ರ ಸರಕಾರಕ್ಕೆ ಅಧಿಕೃತ ಪತ್ರ ಬರೆದು ವಿನಂತಿಸಿಕೊಂಡಿದೆ.

14 ವರ್ಷದ ಬಾಲಕಿ ಮತ್ತು ಮನೆಯ ಆಳು ಹೇಮರಾಜ್‌ರ ಭರ್ಬರ ಹತ್ಯೆಯ ತನಿಖೆಯನ್ನು ಉತ್ತರ ಪ್ರದೇಶ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮಾಯಾವತಿ ಸರಕಾರ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಟೀಕೆಯನ್ನು ಎದುರಿಸುತ್ತಿರುವುದರಿಂದ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ, ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಬರೆದಿರುವ ಪತ್ರವನ್ನು ಕೇಂದ್ರ ಸಿಬ್ಬಂದಿ ಇಲಾಖೆಗೆ ಹಸ್ತಾಂತರಿಸಿ, ಅವಳಿ ಕೊಲೆ ಪ್ರಕರಣದ ಹಿಂದಿರುವ ರಹಸ್ಯದ ಕುರಿತು ಸಿಬಿಐ ಅಭಿಪ್ರಾಯವನ್ನು ಪರಿಗಣಿಸಲಾಗುವುದು.

ಸಿಬಿಐ ಮೂಲಗಳ ಪ್ರಕಾರ ಅರುಶಿ ಮತ್ತು ಹೇಮರಾಜ್ ಕೊಲೆಯನ್ನು ಯಾವ ರೀತಿ ಮಾಡಲಾಯಿತು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲರಾಗಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದೆ.

9ನೇ ತರಗತಿಯಲ್ಲಿ ಓದುತ್ತಿರುವ ಅರುಶಿಯ ತಲೆಗೆ ಪ್ರಹಾರ ಮಾಡಿ ನಂತರ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು, ಮೇ 16 ರಂದು ಮನೆಯ ಆಳು ಹೇಮರಾಜ್ ಶವ ಡಾ, ರಾಜೇಶ್ ತಲ್ವಾರ್ ಮನೆಯ ತಾರಸಿಯ ಮೇಲೆ ದೊರೆತಿತ್ತು. ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಶಿ ತಂದೆ ದಂತ ವೈದ್ಯ ರಾಜೇಶ್ ತಲ್ವಾರ್ ಅವರನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು
ಯಡಿಯ‌ೂರ್‌ಗೆ ಕರುಣಾನಿಧಿ ಶುಭಹಾರೈಕೆ
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ
ಕತಾರ ಕೊಲೆ: ವಿಕಾಸ್, ವಿಶಾಲ್‌ಗೆ ಜೀವಾವಧಿ
ಗೋಲೀಬಾರ್‌ಗೆ ಮತ್ತೆರಡು ಗುಜ್ಜಾರ್ ಬಲಿ
ಜಾತಿಗೆ ಅತೀತವಾದ 'ಗುವೆರಾ' ವಿವಾಹ
ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತಕ್ಕೆ ಪ್ರತಿಭಾ ಸಹಿ