ಪರಿಶಿಷ್ಟ ಜಾತಿಗೆ ಸ್ಥಾನಮಾನ ನೀಡುವಂತೆ ಗುಜ್ಜರ್ ಸಮುದಾಯ ಪ್ರತಿಭಟನೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಜೋತ್ ಸಿಂಗ್ ವಿಫಲರಾಗಿದ್ದಾರೆ ಎಂದು ಅಸಂತೃಪ್ತಿ ವ್ಯಕ್ತಪಡಿಸಿರುವ ರಾಜಸ್ತಾನ ಸರಕಾರವು ಸುದೀರ್ಘ ರಜೆಯ ಮೇಲೆ ತೆರಳುವಂತೆ ಆದೇಶಿಸಿದೆ. ಅಮರ್ ಜೋತ್ ಸಿಂಗ್ ಸ್ಥಾನಕ್ಕೆ ಕೆ.ಎಸ್ ಬೈನ್ಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗುಜ್ಜರ ಸಮುದಾಯ ಮತ್ತು ರಾಜಸ್ತಾನ ಪೊಲೀಸರ ನಡುವೆ ನಡೆದಿರುವ ಘರ್ಷಣೆಯಲ್ಲಿ ಈಗಾಗಲೇ 42 ಜನರು ಸಾವನ್ನಪ್ಪಿದ್ದಾರೆ. ಇದೇ ಸಮಯದಲ್ಲಿ ತನ್ನ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿರುವ ಗುಜ್ಜರ್ ಸಮುದಾಯದ ಸಂಘಟನೆಯು ಭಾರತೀಯ ಜನತಾ ಪಕ್ಷದ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಪಾಸು ಮಾಡಿದೆ.
ಪರಿಶಿಷ್ಟ ಜಾತಿ ಸ್ಥಾನಮಾನಕ್ಕೆ ಹೋರಾಟ ನಡೆಸುತ್ತಿರುವ ಗುಜ್ಜರ್ ಸಮುದಾಯವು ವಿವಾದದ ಪರಿಹಾರಕ್ಕೆ ಕೇಂದ್ರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
|