ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ ಗಡಿಯಲ್ಲಿ ವಾಯು ನೆಲೆ ಪ್ರಾರಂಭ  Search similar articles
ಸುಮಾರು 43 ವರ್ಷಗಳ ಹಿಂದೆ ಅಂದರೆ 1962ರ ಇಂಡೊ-ಚೀನಾ ಯುದ್ಧದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿ ಸ್ಥಗಿತಗೊಂಡಿದ್ದ ಭಾರತೀಯ ವಾಯುದಳಕ್ಕೆ ಸೇರಿರುವ ವಾಯು ನೆಲೆಯು ಇಂದಿನಿಂದ ಪುನಃ ಅಧಿಕೃತವಾಗಿ ಕಾರ್ಯಾರಂಭ ಮಾಡಿತು.

ಚಂಡಿಗಢ್‌ನಿಂದ ಏರ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್ (ವೆಸ್ಟರ್ನ್ ಏರ್ ಕಮಾಂಡ್) ನ ಪಿ. ಕೆ ಬಾರ್ಬರಾ ಅವರನ್ನು ಹೊತ್ತೊಯ್ದ ಎನ್- 32 ಸಾರಿಗೆ ವಿಮಾನವು ಕಾರಾಕೊರಂ ಪಾಸ್ ಬಳಿ ಇರುವ ದವಲತಿಬೇಗ್ ವಾಯು ನೆಲೆಯಲ್ಲಿ ಬಂದಿಳಿಯುವ ಮೂಲಕ ಪುನಃ ಕಾರ್ಯಾರಂಭ ಮಾಡಿತು.

ಕಳೆದ ವಾರವಷ್ಟೆ ಬಾರ್ಬೊರಾ ಅವರು ಜಗತ್ತಿನ ಅತಿ ಎತ್ತರದ ಪ್ರದೇಶಗಳಲ್ಲಿಯೂ ಕೂಡ ವಾಯು ನೆಲೆಯನ್ನು ನಿರ್ವಹಿಸುವ ಮೂಲಕ ಭಾರತದ ವಾಯುದಳದ ಕ್ಷಮತೆಯನ್ನು ಜಗತ್ತಿಗೆ ತೋರ್ಪಡಿಸಲಾಗುವುದು ಎಂದು ಹೇಳಿದ್ದರು. ಭಾರತ, ಪಾಕಿಸ್ತಾನ ಮತ್ತು ಚೀನಾಗಳಿಗೆ ಹೊಂದಿಕೊಂಡಂತಿರುವ ಕಾರಾಕೊರಂ ಕಣಿವೆ ಕೇವಲ ಎಂಟು ಕೀ. ಮಿ ದೂರದಲ್ಲಿದೆ. ಇನ್ನು ಮುಂದೆ ಎನ್-32 ಸರಕು ಸಾರಿಗೆ ವಿಮಾನಗಳು ಸೇರಿದಂತೆ ಎಲ್ಲ ರೀತಿಯ ಯುದ್ದ ವಿಮಾನ ಮತ್ತು ಹೆಲಿಕ್ಯಾಪ್ಟರುಗಳು ದವಲತಿಬೇಗ್ ವಾಯುನೆಲೆಯನ್ನು ತಮ್ಮ ಕಾರ್ಯಾಚರಣೆಗಳಿಗೆ ಬಳಸಲಿವೆ ಎಂದು ಭಾರತೀಯ ವಾಯುದಳ ಹೇಳಿದೆ.

ಭಾರತ, ಪಾಕಿಸ್ತಾನ ಮತ್ತು ಚೀನಾದ ಗಡಿಗಳಿಗೆ ಹೊಂದಿಕೊಂಡಂತಿರುವ ದೂರದ ಗಡಿ ಪ್ರದೇಶಗಳಲ್ಲಿ ವಾಯುದಳದ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ವಯ ವಾಯುನೆಲೆಗಳ ಬಳಕೆಯನ್ನು ಪುನಃ ಪ್ರಾರಂಭಿಸಲಾಗುತ್ತಿದೆ.
ಭಾರತೀಯ ವಾಯುದಳದ ಎಂಐಃ17,ಎಂಐ-16 ಹೆಲಿಕಾಪ್ಟರ್ಸ್ ಮತ್ತು ದ್ರುವ ಹೆಲಿಕಾಪ್ಟರುಗಳು ಗಡಿ ಪ್ರದೇಶಗಳಲ್ಲಿ ನಿಯೋಜಿತ ಸೇನಾ ಸಿಬ್ಬಂದಿಗಳಿಗೆ ಅಗತ್ಯ ಸರಕುಗಳನ್ನು ಪೂರೈಕೆ ಮಾಡಲಿವೆ ಎಂದು ವಾಯುದಳ ಹೇಳಿದೆ.
ಮತ್ತಷ್ಟು
ಗುಜ್ಜರ್ ಪ್ರತಿಭಟನೆ: ರಜೆ ಮೇಲೆ ತೆರಳಿದ ಡಿಜಿಪಿ
ಅರುಶಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ
ಯಡಿಯ‌ೂರ್‌ಗೆ ಕರುಣಾನಿಧಿ ಶುಭಹಾರೈಕೆ
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ
ಕತಾರ ಕೊಲೆ: ವಿಕಾಸ್, ವಿಶಾಲ್‌ಗೆ ಜೀವಾವಧಿ
ಗೋಲೀಬಾರ್‌ಗೆ ಮತ್ತೆರಡು ಗುಜ್ಜಾರ್ ಬಲಿ