ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರ್ಗಮನ ಫಥ ಸಂಚಲನದಲ್ಲಿ ಆಂಟನಿ ಅಸ್ವಸ್ಥ  Search similar articles
ನ್ಯಾಷನಲ್ ಡಿಫೆನ್ಸ್ ಆಕಾಡೆಮಿಯ ನಿರ್ಗಮನ ಪಥ ಸಂಚಲದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸುತ್ತಿದ್ದ ಕೇಂದ್ರ ರಕ್ಷಣಾ ಖಾತೆ ಸಚಿವ ಎ.ಕೆ ಆಂಟನಿ ಅವರು ಬವಳಿ ಬಂದು ಅಸ್ವಸ್ಥಗೊಂಡಿದ್ದು ಅವರನ್ನು ಹತ್ತಿರದಲ್ಲೇ ಇದ್ದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯಾಷನಲ್ ಅಕಾಡೆಮಿಯ 114ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದಕ ನೀಡಿ ನಂತರ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕುಸಿದು ಕೆಳಗೆ ಬಿದ್ದರು. ನಂತರ ಅಲ್ಲಿಯೆ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ ಉಪಚರಿಸಲಾಯಿತು. ಕೆಲಕಾಲದ ನಂತರ ಚೇತರಿಸಿಕೊಂಡ ಅವರು ಕಾರ್ಯಕ್ರಮವನ್ನು ಮುಂದುವರಿಸುವಂತೆ ಹೇಳಿದರು. ಕಾರ್ಯಕ್ರಮ ಪುನರಾರಂಭಗೊಂಡ ಕೆಲವೇ ನಿಮಿಷಗಳ ಅವಧಿಯಲ್ಲಿ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು.

ಅರವತ್ತೆಂಟು ವರ್ಷದ ರಕ್ಷಣಾ ಸಚಿವರನ್ನು ತಕ್ಷಣ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಕೇಂದ್ರ ಸಚಿವರು ಚೇತರಿಸಿಕೊಳ್ಳುತ್ತಿದ್ದಾರೆ. ಅವಶ್ಯಕತೆ ಬಿದ್ದಲ್ಲಿ ಆಂಟನಿ ಅವರನ್ನು ಪುಣೆಯಲ್ಲಿನ ಕಮಾಂಡ್ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗುವುದು. ಅಲ್ಲದೇ ನವದೆಹಲಿಯಲ್ಲಿನ ಅವರ ಆಪ್ತ ವೈದ್ಯರನ್ನು ಸಂಪರ್ಕಿಸಿ ಸಚಿವರ ಆರೋಗ್ಯದ ಹಿನ್ನೆಲೆಯನ್ನು ತಿಳಿದುಕೊಳ್ಳಲಾಗುತ್ತದೆ ಎಂದು ಎನ್‌ಡಿಎ ಮಹಾವಿದ್ಯಾಲಯದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಚೀನಾ ಗಡಿಯಲ್ಲಿ ವಾಯು ನೆಲೆ ಪ್ರಾರಂಭ
ಗುಜ್ಜರ್ ಪ್ರತಿಭಟನೆ: ರಜೆ ಮೇಲೆ ತೆರಳಿದ ಡಿಜಿಪಿ
ಅರುಶಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ
ಯಡಿಯ‌ೂರ್‌ಗೆ ಕರುಣಾನಿಧಿ ಶುಭಹಾರೈಕೆ
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ
ಕತಾರ ಕೊಲೆ: ವಿಕಾಸ್, ವಿಶಾಲ್‌ಗೆ ಜೀವಾವಧಿ