ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾರತಮ್ಯ ತೊಡೆಯಲು ಅಂತರ್ಜಾತಿ ವಿವಾಹ ಪ್ರೋತ್ಸಾಹ  Search similar articles
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ಅಂತರ್ಜಾತಿ ವಿವಾಹಗಳಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಕನಿಷ್ಠ 50 ಸಾವಿರ ರೂಪಾಯಿಗೆ ಏರಿಸುವಂತೆ ಮನವಿ ಮಾಡಿರುವುದಾಗಿಯೂ, ಅದರಲ್ಲಿ ಶೇ.50 ಪಾಲನ್ನು ಕೇಂದ್ರ ಸರಕಾರವು ಭರಿಸುವುದಾಗಿಯೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖಾ ಸಚಿವೆ ಮೀರಾ ಕುಮಾರ್ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕುಸಿತ ಮತ್ತು ದೋಷಮುಕ್ತಿಯ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಕೇಂದ್ರ ಸರಕಾರ ತೀವ್ರ ಕಳವಳ ಹೊಂದಿದೆ ಎಂದು ಮೀರಾ ಕುಮಾರ್ ಹೇಳಿದರು.

ಎಲ್ಲ ರಾಜ್ಯಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ ಹೊರತಾಗಿಯೂ, ಪರಿಶಿಷ್ಟ ಜಾತಿ, ವರ್ಗದವರ ಮೇಲೆ ನಡೆದ ದೌರ್ಜನ್ಯ ಕುರಿತ ಶೇ.80ರಷ್ಟು ಪ್ರಕರಣಗಳಲ್ಲೂ ಈ ರೀತಿಯಾಗುತ್ತಿರುವುದು ಕಳವಳದ ಸಂಗತಿ ಎಂದು ಅವರು ನುಡಿದರು.
ಮತ್ತಷ್ಟು
ನಿರ್ಗಮನ ಫಥ ಸಂಚಲನದಲ್ಲಿ ಆಂಟನಿ ಅಸ್ವಸ್ಥ
ಚೀನಾ ಗಡಿಯಲ್ಲಿ ವಾಯು ನೆಲೆ ಪ್ರಾರಂಭ
ಗುಜ್ಜರ್ ಪ್ರತಿಭಟನೆ: ರಜೆ ಮೇಲೆ ತೆರಳಿದ ಡಿಜಿಪಿ
ಅರುಶಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ
ಯಡಿಯ‌ೂರ್‌ಗೆ ಕರುಣಾನಿಧಿ ಶುಭಹಾರೈಕೆ
ಬಿಹಾರ್ ಸೂಪರ್‌ 30 ಗೆ ಶೇ100ರ ಫಲಿತಾಂಶ