ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿಪಾರಿನಿಂದ ಆಘಾತಗೊಂಡಿರುವ ಬರ್ನಿ  Search similar articles
ಭಯೋತ್ದಾದನೆ ಕುರಿತು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ ಮಾಜಿ ಮಾನವ ಹಕ್ಕು ಖಾತೆ ಸಚಿವ ಅನ್ಸಾರ್ ಬರ್ನಿಯನ್ನು ಗಡಿಪಾರು ಮಾಡಿರುವ ಭಾರತದ ಕ್ರಮಕ್ಕೆ ಅವರು ಆಘಾತ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ನೇಣುಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಭಾರತೀಯ ಪ್ರಜೆಗಳಾದ ಕಾಶ್ಮೀರ್ ಸಿಂಗ್ ಮತ್ತು ಸರಬ್‌‌ಜಿತ್ ಸಿಂಗ್ ಅವರನ್ನು ಬಿಡುಗಡೆಗೊಳಿಸಲು ಯಶಸ್ವಿಯಾಗಿ ಹೋರಾಡಿದ್ದ ಬರ್ನಿಯನ್ನು ಭಾರತ ಏಕಾಏಕಿಯಾಗಿ ಇಲ್ಲಿಂದ ಗಡಿಪಾರು ಮಾಡಿತ್ತು.

ಶುಕ್ರವಾರ ರಾತ್ರಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬರ್ನಿಯನ್ನು ಎಮಿರೇಟ್ಸ್ ಏರ್‌‌ವೇಸ್ ವಿಮಾನದ ಮೂಲಕ ದುಬೈಗೆ ಗಡಿಪಾರು ಮಾಡಲಾಯಿತು. ಅವರ ವಿರುದ್ಧ ವಿಚಕ್ಷಣೆಯ ನೋಟಿಸ್ ಜಾರಿಮಾಡಲಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಯಿತೆಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬರ್ನಿ ವಿರುದ್ಧ ಯಾರು, ಯಾವುದರ ಸಂಬಂಧ ನೋಟಿಸ್ ಜಾರಿ ಮಾಡಿದ್ದಾರೆಂಬುದು ಇನ್ನೂ ಸ್ಪಷ್ಟಪವಾಗಿಲ್ಲ. ಆದರೆ ವಿದೇಶ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ ಬರ್ನಿ ಅವರ ಗಡಿಪಾರು ಕೆಲವು ತಪ್ಪಿನಿಂದಾಗಿ ಆಗಿರಬೇಕೆಂದು ತಿಳಿಸಿದೆ.

ನಿಜಕ್ಕೂ ಏನು ನಡೆದಿದೆ ಎನ್ನುವುದೇ ನನಗೆ ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಬರ್ನಿ, ಬಂದ ವಿಮಾನದಲ್ಲೇ ವಾಪಸು ತೆರಳಿದ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಈ ಘಟನೆ ಕುರಿತು ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಾಗಿ ಬರ್ನಿ ಬೆದರಿಕೆ ಹಾಕಿದ್ದಾರೆ.
ಮತ್ತಷ್ಟು
ಹೋಟೆಲ್, ಪಬ್, ಬಾರ್‌ಗಳಲ್ಲೂ ನೋ ಸ್ಮೋಕಿಂಗ್
ರೈತರ ಜೀವನಾಡಿ 'ಮುಂಗಾರು' ಕೇರಳ ಪ್ರವೇಶ
ತಾರತಮ್ಯ ತೊಡೆಯಲು ಅಂತರ್ಜಾತಿ ವಿವಾಹ ಪ್ರೋತ್ಸಾಹ
ನಿರ್ಗಮನ ಫಥ ಸಂಚಲನದಲ್ಲಿ ಆಂಟನಿ ಅಸ್ವಸ್ಥ
ಚೀನಾ ಗಡಿಯಲ್ಲಿ ವಾಯು ನೆಲೆ ಪ್ರಾರಂಭ
ಗುಜ್ಜರ್ ಪ್ರತಿಭಟನೆ: ರಜೆ ಮೇಲೆ ತೆರಳಿದ ಡಿಜಿಪಿ