ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕ ಪರಾಭವದ ಪರಾಮರ್ಶೆಗೆ ಸಮಿತಿ: ಕಾಂಗ್ರೆಸ್  Search similar articles
ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ, ಪಕ್ಷವನ್ನು ಪುನಶ್ಚೇತನ ಗೊಳಿಸುವ ಮಾರ್ಗಗಳ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ರಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ದೇಶದಲ್ಲಿ ತಾಂಡವವಾಡುತ್ತಿರುವ ಕೋಮುವಾದ ಮತ್ತು ಭಯೋತ್ಪಾದನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಡಲು ಪಕ್ಷ ಸಜ್ಜಾಗಬೇಕಾಗಿದೆ ಎಂದು ಶನಿವಾರ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿತು.
ಅಲ್ಲದೇ ಸಭೆಯಲ್ಲಿ ಇತ್ತೀಚೆಗೆ ಜೈಪುರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಬಲಿಯಾದವರಿಗೆ ಹಾಗೂ ಗುಜ್ಜರ್ ಚಳವಳಿಯಲ್ಲಿ ಸಾವನ್ನಪ್ಪಿದ್ದ ಹಾಗೂ ಮೃತಪಟ್ಟ ಖ್ಯಾತ ಗಾಂಧಿವಾದಿ ನಿರ್ಮಲಾ ದೇಶಪಾಂಡೆ ಅವರಿಗೆ ಸಂತಾಪ ಸೂಚಿಸಿತು.

ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ, ಪಕ್ಷವನ್ನು ಪುನಶ್ಚೇತನ ಗೊಳಿಸುವ ಮಾರ್ಗ ಗಳ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ರಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ಸಮಿತಿಯನ್ನು ಶೀಘ್ರ ರಚಿಸಲಾಗುವುದು ಮತ್ತು ಅದು 15ದಿನಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾ ರ್ದನ್ ದ್ವಿವೇದಿ ಮೂರುವರೆ ತಾಸಿನ ಸಿಡಬ್ಲ್ಯುಸಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಪಾಲ್ಗೊಂಡಿದ್ದ ಸಭೆಯು ಕರ್ನಾಟಕ ಚುನಾವಣೆಯಲ್ಲಿ ತೋರಿದ್ದ ಸಾಧನೆ ಬಗ್ಗೆ ಪರಾ ಮರ್ಶೆ ನಡೆಸಿತು. ಚುನಾವಣೆಯಲ್ಲಿ ಬಹುಮತ ಪಡೆಯಲು ಪಕ್ಷ ವಿಫಲಗೊಂಡಿತ್ತು. ಕರ್ನಾಟಕದಲ್ಲಿ ಪಕ್ಷ ಸೋತಿರುವ ಬಗ್ಗೆ ಉತ್ತರದಾಯಿತ್ವವನ್ನು ನಿಗದಿಗೊಳಿಸಬೇಕೆಂದು ಪಕ್ಷದ ಒಂದು ವರ್ಗ ಈಗಾಗಲೇ ಆಗ್ರಹಿಸುತ್ತಿದೆ.

ಈ ವರ್ಷ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಪಕ್ಷ ಸಮರೋಪಾದಿಯಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಜ್ಜಾಗಬೇಕಾಗಿದೆ ಎಂದು ಸೂಚಿಸಿದೆ.
ಮತ್ತಷ್ಟು
ಗಡಿಪಾರಿನಿಂದ ಆಘಾತಗೊಂಡಿರುವ ಬರ್ನಿ
ಹೋಟೆಲ್, ಪಬ್, ಬಾರ್‌ಗಳಲ್ಲೂ ನೋ ಸ್ಮೋಕಿಂಗ್
ರೈತರ ಜೀವನಾಡಿ 'ಮುಂಗಾರು' ಕೇರಳ ಪ್ರವೇಶ
ತಾರತಮ್ಯ ತೊಡೆಯಲು ಅಂತರ್ಜಾತಿ ವಿವಾಹ ಪ್ರೋತ್ಸಾಹ
ನಿರ್ಗಮನ ಫಥ ಸಂಚಲನದಲ್ಲಿ ಆಂಟನಿ ಅಸ್ವಸ್ಥ
ಚೀನಾ ಗಡಿಯಲ್ಲಿ ವಾಯು ನೆಲೆ ಪ್ರಾರಂಭ