ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಲೆಯೂ ಅಪಘಾತದ ಸಾವು: ತೀರ್ಪು  Search similar articles
ಆಕಸ್ಮಿಕವಾಗಿ ಕೊಲೆಯಾಗಿ ಸಾವನ್ನಪ್ಪುವುದು ಕೂಡ ಅಪಘಾತದ ಸಾವು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ರಾಷ್ಟ್ರೀಯ ಗ್ರಾಹಕ ಆಯೋಗವು ಕೊಲೆಯಾಗಿರುವ ವ್ಯಕ್ತಿಯ ಕುಟುಂಬಕ್ಕೆ ಜೀವ ವಿಮಾ ಕಂಪನಿಗಳು ಪರಿಹಾರವನ್ನು ಕೇವಲ ಕೊಲೆಯ ಆಧಾರದ ಮೇಲೆ ನಿರಾಕರಿಸುವಂತಿಲ್ಲ. ಒಟ್ಟಾರೆ ತನ್ನ ತೀರ್ಪಿನಲ್ಲಿ ಕೊಲೆಯೂ ಕೂಡ ಒಂದು ಆಕಸ್ಮಿಕ ಸಾವು ಆದ್ದರಿಂದ ಅದನ್ನು ಅಪಘಾತದ ಸಾವು ಎಂದು ಜೀವ ವಿಮಾ ಕಂಪನಿಗಳು ಪರಿಹಾರ ನೀಡುವ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ನ್ಯಾಯಮೂರ್ತಿ ಎಂ.ಬಿ. ಶಾ ಅವರ ನೇತೃತ್ವದ ಆಯೋಗವು ವಿಮಾ ಪಾಲಿಸಿ ಹೊಂದಿರುವ ವ್ಯಕ್ತಿಯ ಜೀವನವು ಕೊಲೆಯಲ್ಲಿ ಪರ್ಯಾವಸಾನಗೊಂಡಲ್ಲಿ ಅದನ್ನು ಆಕಸ್ಮಿಕ ಸಾವು ಎಂದು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಯಾದೇವಿ ಎನ್ನುವ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ಗ್ರಾಹಕ ಆಯೋಗವು ಈ ಮೊದಲು ಉತ್ತರ ಪ್ರದೇಶ ರಾಜ್ಯ ಗ್ರಾಹಕ ಆಯೋಗವು ನೀಡಿದ ತೀರ್ಪನ್ನು ರದ್ದುಗೊಳಿಸಿ ಮೇಲಿನಂತೆ ಆದೇಶ ನೀಡಿತು. ಮಾಯಾದೇವಿ ಅವರ ಪತಿಯ ಸಾವು ಕೊಲೆಯ ಮೂಲಕ ಆಗಿರುವ ಕಾರಣ ಜೀವ ವಿಮಾ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಜೀವ ವಿಮಾ ನಿಗಮವು ರಾಜ್ಯ ಗ್ರಾಹಕ ಆಯೋಗದ ಎದುರು ವಾದ ಮಂಡಿಸಿತ್ತು.

ವಿಚಾರಣೆಯನ್ನು ಕೈಗೆತ್ತಿಕೊಂಡ ವಿಭಾಗೀಯ ಪೀಠದಲ್ಲಿ ಉಪಸ್ಥಿತರಿದ್ದ ರಾಜ್ಯಲಕ್ಷ್ಮೀ ರಾವ್ ಮತ್ತ ಅನುಪಮ್ ದಾಸ್ ಗುಪ್ತಾ ಅವರುಗಳು ಜೀವ ವಿಮಾ ನಿಗಮವು ಜಾರಿಗೆ ತಂದಿರುವ ಮನಿ ಬ್ಯಾಕ್ ಪಾಲಿಸಿಯಲ್ಲಿ ವಿಮಾದಾರನು ಅಪಘಾತದ ಸಾವನ್ನಪ್ಪಿದರೆ ಆತನ ಉತ್ತರಾಧಿಕಾರಿಗಳಿಗೆ ಪರಿಹಾರ ನೀಡುವುದಾಗಿ ಸ್ಪಷ್ಟಪಡಿಸಿತ್ತು. ವಿಮಾ ಪಾಲಿಸಿಯಲ್ಲಿ ಅಪಘಾತದ ಸಾವು ಎಂದರೆ ಬಾಹ್ಯ ರೂಪದ ಹಿಂಸೆ ಮತ್ತು ಕಣ್ಣಿಗೆ ಕಾಣುವ ಪೆಟ್ಟಿನಿಂದ ಸಾವು ಸಂಭವಿಸಿದರೆ ಅದು ಅಪಘಾತದ ಸಾವು ಎಂದು ವ್ಯಾಖ್ಯಾನ ಮಾಡಿತ್ತು.

ಇದೇ ಅಂಶವನ್ನು ತನ್ನ ತೀರ್ಪಿಗೆ ಬಳಸಿಕೊಂಡಿರುವ ಆಯೋಗವು ಕೊಲೆಯಲ್ಲಿ ವ್ಯಕ್ತಿಯ ಹಿಂಸೆ ಮತ್ತು ದೈಹಿಕವಾಗಿ ಪೆಟ್ಟು ತಿಂದ ಪರಿಣಾಮವಾಗಿ ಸಾವನ್ನಪ್ಪುತ್ತಾನೆ ಎಂದು ಹೇಳಿತು.

ಉತ್ತರ ಪ್ರದೇಶ ರಾಜ್ಯ ಗ್ರಾಹಕ ನ್ಯಾಯಾಲಯವು ನೀಡಿರುವ ತೀರ್ಪನ್ನು ರದ್ದುಗೊಳಿಸಿದ ರಾಷ್ಟ್ರೀಯ ಗ್ರಾಹಕ ಆಯೋಗವು ಮೃತನ ವಾರಸುದಾಳು ಆಗಿರುವ ಮಾಯಾದೇವಿಯ ಅವರಿಗೆ ಎರಡು ಲಕ್ಷ ರೂಗಳ ಪರಿಹಾರಕ್ಕೆ ಶೇ 12 ರಷ್ಟು ಬಡ್ಡಿ, ಬೋನಸ್, ಅಪಘಾತದ ಸಾವಿಗೆ ನಿಯಮಾವಳಿಯಡಿಯಲ್ಲಿ ದೊರೆಯುವ ಹಣಕಾಸು ನೆರವು ಮತ್ತು ಐದು ಸಾವಿರ ರೂಗಳ ಪ್ರಕರಣದ ವೆಚ್ಚವಾಗಿ ಪಾವತಿ ಮಾಡಬೇಕು ಎಂದು ತೀರ್ಪು ನೀಡಿದ್ದು, ಜುಲೈ 1996ರಲ್ಲಿ ಮಾಯಾದೇವಿಯ ಪತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಮತ್ತಷ್ಟು
ಕರ್ನಾಟಕ ಪರಾಭವದ ಪರಾಮರ್ಶೆಗೆ ಸಮಿತಿ: ಕಾಂಗ್ರೆಸ್
ಗಡಿಪಾರಿನಿಂದ ಆಘಾತಗೊಂಡಿರುವ ಬರ್ನಿ
ಹೋಟೆಲ್, ಪಬ್, ಬಾರ್‌ಗಳಲ್ಲೂ ನೋ ಸ್ಮೋಕಿಂಗ್
ರೈತರ ಜೀವನಾಡಿ 'ಮುಂಗಾರು' ಕೇರಳ ಪ್ರವೇಶ
ತಾರತಮ್ಯ ತೊಡೆಯಲು ಅಂತರ್ಜಾತಿ ವಿವಾಹ ಪ್ರೋತ್ಸಾಹ
ನಿರ್ಗಮನ ಫಥ ಸಂಚಲನದಲ್ಲಿ ಆಂಟನಿ ಅಸ್ವಸ್ಥ