ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಶಿ ಕೊಲೆ: ಉ.ಪ್ರ ಪೊಲೀಸರ ವಿರುದ್ಧ ಕ್ರಮ  Search similar articles
ಹದಿಮೂರು ವರುಷದ ಬಾಲಕಿ ಅರುಶಿಯ ಕೊಲೆಯ ನಂತರ ಅವಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಹೇಳಿಕೆ ನೀಡಿದ ಉತ್ತರ ಪ್ರದೇಶ ಪ್ರದೇಶ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕೇಂದ್ರ ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ದಿ ಖಾತೆ ಸಟಿವೆ ರೇಣುಕಾ ಚೌಧರಿ ಅವರು ತಮ್ಮ ಸಲಹಾ ಮಂಡಳಿಯ ಸಭೆಯನ್ನು ಕರೆದಿದ್ದಾರೆ.

ಸೋಮವಾರ ಕರೆಯಲಾಗಿರುವ ಸಭೆಯಲ್ಲಿ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಸಾಧ್ಯಾಸಾಧ್ಯತೆಯನ್ನು ವಿವರವಾಗಿ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸಚಿವಾಲಯದ ಸಲಹಾ ಮಂಡಳಿಯನ್ನು ಆಹ್ವಾನಿಸಿದ್ದಾರೆ ಎಂದು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅರುಶಿ ಮತ್ತು ಹೇಮರಾಜ್ ಅವಳಿ ಕೊಲೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು ಕೊಲೆಯ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಅವ್ಯಾಚ್ಯ ಭಾಷೆಯಲ್ಲಿ ವಿವರಿಸುತ್ತಿರುವುದರ ವಿರುದ್ಧ ಎಲ್ಲ ಕಡೆಯಿಂದ ಟೀಕೆ ವ್ಯಕ್ತವಾಗಿದೆ.

ಕಳೆದ ಗುರುವಾರ ಕೇಂದ್ರ ಸಚಿವೆ ರೇಣುಕಾ ಚೌಧರಿ ಅವರು ಕೆಟ್ಟ ಭಾಷೆಯಲ್ಲಿ ಹೇಳಿಕೆ ನೀಡಿದ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯ ಮಾಡಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಸಚಿವೆ ರೇಣುಕಾ ಚೌಧರಿ ಕರೆದಿರುವ ಸಭೆಗೆ ನ್ಯಾಯಾವಾದಿಗಳು, ಮಹಿಳಾ ಸಂಘಟನೆಯ ಕಾರ್ಯಕರ್ತರು ಮತ್ತು ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿಯ ಪ್ರತಿನಿಧಿಗಳು ಆಗಮಿಸಿ ಮೃತ ಬಾಲಕಿಯ ಚಾರಿತ್ರ್ಯ ವಧೆ ಮಾಡುತ್ತಿರುವ ಪೊಲೀಸರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ವಿರುದ್ಧ ಚರ್ಚೆ ನಡೆಸಲಿದ್ದಾರೆ.
ಮತ್ತಷ್ಟು
ಆಂಧ್ರ ಉಪಚುನಾವಣೆ: ಟಿಡಿಪಿ ಮುನ್ನಡೆ
ಕೊಲೆಯೂ ಅಪಘಾತದ ಸಾವು: ತೀರ್ಪು
ಕರ್ನಾಟಕ ಪರಾಭವದ ಪರಾಮರ್ಶೆಗೆ ಸಮಿತಿ: ಕಾಂಗ್ರೆಸ್
ಗಡಿಪಾರಿನಿಂದ ಆಘಾತಗೊಂಡಿರುವ ಬರ್ನಿ
ಹೋಟೆಲ್, ಪಬ್, ಬಾರ್‌ಗಳಲ್ಲೂ ನೋ ಸ್ಮೋಕಿಂಗ್
ರೈತರ ಜೀವನಾಡಿ 'ಮುಂಗಾರು' ಕೇರಳ ಪ್ರವೇಶ