ಪಾಟ್ನಾ: ಮಾವೋವಾದಿ ಬಂಡುಕೋರರು ಬಿಹಾರದ ಜಾಮೊಯ್ ಜಿಲ್ಲೆಯ ರೈಲ್ವೇ ಹಳಿಯನ್ನು ಸೋಮವಾರ ಸ್ಫೋಟಿಸಿದ್ದಾರೆ. ಇದಲ್ಲದೆ ಎಸ್‌ಡಿಒ ಕಚೇರಿಯ ಒಂದು ಭಾಗವನ್ನು ಸ್ಫೋಟಿಸಿದ್ದು, ಎಫ್‌ಸಿಐ ಗೋಡಾನಿನಿಂದ ಆಹಾರ ಧಾನ್ಯಗಳನ್ನು ಲೂಟಿ ಮಾಡಿದ್ದಾರೆ. ಪೂರ್ವ ಬಿಹಾರದ ಐದು ಜಿಲ್ಲೆಗಳಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿದ್ದ ವೇಳೆ ನಕ್ಸಲರು ಈ ಬುಡಮೇಲು ಕೃತ್ಯಗಳನ್ನು ನಡೆಸಿದ್ದಾರೆ.
ತಮ್ಮ ಐದು ಸಹಚರರ ಇತ್ತೀಚಿನ ಬಂಧನವನ್ನು ಪ್ರತಿಭಟಿಸಿ ಬಂದ್‌ಗೆ ಕರೆನೀಡಲಾಗಿದೆ.
ಜಾಮೊಯ್ ಜಿಲ್ಲೆಯಲ್ಲಿ ನಸುಕಿನ 3.20ರ ವೇಳೆಗೆ ನಾರ್‌ಗಂಜ್ ಮತ್ತು ಘೋರ್‌ಪರನ್ ನಿಲ್ದಾಣಗಳ ನಡುವಿನ ರೈಲ್ವೇ ಹಳಿಯನ್ನು ನಕ್ಸಲರು ಸ್ಫೋಟಿಸಿರುವ ಕಾರಣ ಪಾಟ್ನಾ ಮತ್ತು ಹೌರಾ ನಡುವಿನ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ವಿಮಲ್ ಕುಮಾರ್ ತಿಳಿಸಿದ್ದಾರೆ.
ಪೂರ್ವಾಂಚಲ್ ಎಕ್ಸ್‌ಪ್ರೆಸ್‌ನ ಕಾರ್ಗೋ ವ್ಯಾನು ರೈಲ್ವೇ ಹಳಿ ಸ್ಫೋಟದ ತಕ್ಷಣ ಇಲ್ಲಿ ಹಾದು ಹೋಗಿರುವ ಕಾರಣ ಹಳಿತಪ್ಪಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.
|