ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರು ಉಗ್ರರು ಸೇನೆಯಿಂದ ಹತ್ಯೆಗೀಡಾಗಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಪಂಗಡ ಮತ್ತು ರಾಷ್ಟ್ರೀಯ ರೈಫಲ್ಸ್ ಉತ್ತರ ಕಾಶ್ಮೀರದ ವಾಟರಗಮ್ ಎಂಬ ಗ್ರಾಮದಲ್ಲಿ ನಡೆಸಿದ ಕ್ಷಿಪ್ರಕಾರ್ಯಾಚರಣೆ ವೇಳೆ ಉಗ್ರರು ಹತರಾಗಿದ್ದಾರೆ. ಉಗ್ರರ ಕುರಿತು ಖಚಿತ ಮಾಹಿತಿಯಾಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಕಾರ್ಯಾಚರಣೆ ವೇಳೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗುಂಡೇಟಿಗೀಡಾದ ಉಗ್ರರರು ಹತರಾಗಿದ್ದಾರೆ. ಎರಡು ಎಕೆ ರೈಫಲುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
|