ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲಿಯಂ ಬೆಲೆ ಏರಿಕೆ ಸನ್ನಿಹಿತ?  Search similar articles
PTI
ತನ್ನ ಸರಕಾರವು ತೈಲ ಸಹಾಯಧನವನ್ನು ಏರಿಸುವ ಸಾಧ್ಯತೆಯೇ ಇಲ್ಲವೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಸದ್ಯವೇ ಪೆಟ್ರೋಲಿಂ ಉತ್ಪನ್ನಗಳ ಬೆಲೆ ಏರಿಕೆ ಸನ್ನಿಹಿತವಾಗಿದೆ ಎಂಬ ಸುಳಿವು ಲಭ್ಯವಾಗಿದೆ. ಜಾಗತಿಕವಾಗಿ ಕಚ್ಚಾತೈಲದ ಬೆಲೆಯು 135 ಡಾಲರ್‌ಗಳಿಗೆ ಏರಿರುವ ಹಿನ್ನೆಲೆಯಲ್ಲಿ, ಭಾರತೀಯ ಆರ್ಥಿಕಾಭಿವೃದ್ಧಿಯು ಭೀತಿಯಡಿ ಸಿಲುಕುತ್ತಿದೆ ಎಂದು ಅವರು ಸೋಮವಾರ ಹೇಳಿದ್ದಾರೆ.

ಸದ್ಯವೇ ತೈಲ ಬೆಲೆಗಳ ಏರಿಕೆ ಕುರಿತು ಸೂಚನೆ ನೀಡಿದ ಪ್ರಧಾನಿ, ಭಾರತದಲ್ಲಿ ತೈಲ ಬೆಲೆಗಳು ಜಾಗತಿಕ ಪ್ರವೃತ್ತಿಯ ಪ್ರತಿಫಲನವಲ್ಲ ಎಂದು ಹೇಳಿದರು. ವಿವೇಕಯುಕ್ತವಾದ ಆರ್ಥಿಕ ನೀತಿಗಳ ವಿಸ್ತರಿತ ಒಮ್ಮತಕ್ಕೆ, ಅದರಲ್ಲೂ ವಿಶೇಷವಾಗಿ ತೈಲಬೆಲೆಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಕರೆ ನೀಡಿದ ಪ್ರಧಾನಿ, ತಮ್ಮ ಸರಕಾರವು ಕುರಡು ನಿಯಂತ್ರಣಗಳತ್ತ ಮರಳುವುದರ ವಿರುದ್ಧವಾಗಿದೆ ಎಂದು ನುಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಸೀಮೆಣ್ಣೆ ಬೆಲೆ ಏರಿಸಲು ತಮ್ಮ ಸರಕಾರವು ಅನುವು ನೀಡಲಿಲ್ಲ ಎಂಬುದನ್ನೂ ಅವರು ಬೆಟ್ಟುಮಾಡಿದರು.

ಹಣದುಬ್ಪರವು ನಿಯಂತ್ರಣಕ್ಕೆ ಸಿಲುಕದಂತೆ ಏರಿಕೆಯಾಗಿರುವುದನ್ನು ಪ್ರಸ್ತಾಪಿಸಿದ ಅವರು ಯುಪಿಎ ಸರಕಾರವು ಆರ್ಥಿಕ ಅಭಿವೃದ್ಧಿಗೆ ತೊಂದರೆಯಾಗದ ರೀತಿಯಲ್ಲಿ ಬೆಲೆಏರಿಕೆ ತಡೆಯನ್ನು ಬಯಸುತ್ತದೆ. ಯುಪಿಎ ಸರಕಾರವು ಕೈಗೊಂಡಿರುವ ಹಣಕಾಸು ಕ್ರಮಗಳು ಕಾರ್ಯಗತಗೊಂಡ ತಕ್ಷಣವೇ ಹಣದುಬ್ಬರು ತಹಬಂದಿಗೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಭಾರತೀಯ ಆರ್ಥಿಕತೆಯು ಶೇ.8-9 ದರದಲ್ಲಿ ಮುಂದುವರಿಯಲಿದೆ ಎಂದು ನುಡಿದ ಅವರು ಸ್ಥಿರ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮತ್ತಷ್ಟು
ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ
ನಕ್ಸಲರಿಂದ ರೈಲ್ವೇ ಹಳಿ ಸ್ಫೋಟ
ಅರುಶಿ ಕೊಲೆ: ಉ.ಪ್ರ ಪೊಲೀಸರ ವಿರುದ್ಧ ಕ್ರಮ
ಆಂಧ್ರ ಉಪಚುನಾವಣೆ: ಟಿಡಿಪಿ ಮುನ್ನಡೆ
ಕೊಲೆಯೂ ಅಪಘಾತದ ಸಾವು: ತೀರ್ಪು
ಕರ್ನಾಟಕ ಪರಾಭವದ ಪರಾಮರ್ಶೆಗೆ ಸಮಿತಿ: ಕಾಂಗ್ರೆಸ್