ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿ 'ಸತ್ತಿದೆ'  Search similar articles
ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿಯು 'ಸತ್ತುಹೋಗಿರುವ ಮತ್ತು ನಿಷ್ಪ್ರಯೋಜಕವಾದುದು' ಎಂದು ಹೇಳಿರುವ ಸಿಪಿಐ-ಎಂ, ಇದನ್ನು ಮುಂದುವರಿಸುವುದು ಅಥವಾ ನಿಲ್ಲಿಸುವುದರಿಂದ ಹೆಚ್ಚಿನ ಪರಿಣಾಮ ಬೀರಲಾರದು ಎಂದು ಅಭಿಪ್ರಾಯಿಸಿದೆ.

ಪ್ರಮುಖ ನೀತಿಗಳಿಗೆ ಸಂಬಂಧಿಸಿದಂತೆ, ಸರಕಾರ ಮತ್ತು ಎಡಪಕ್ಷಗಳ ನಡುವೆ ಅಭಿಪ್ರಾಯ ವಿನಿಮಯಕ್ಕಾಗಿ ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿಯನ್ನು ರೂಪಿಸಲಾಗಿದೆ. ಆದರೆ, ಇದೀಗ ಅಕ್ಷರಶಃ ನಿಷ್ಪ್ರಯೋಜಕ ಮತ್ತು ಸತ್ತು ಹೋಗಿರುವ ಮಂಡಳಿಯಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಬಿಮನ್ ಹೋಸ್ ಹೇಳಿದ್ದಾರೆ. ಅವರು ಈ ವೇದಿಕೆಯನ್ನು ವಾಪಾಸು ಪಡೆದುಕೊಳ್ಳುವ ಕುರಿತ ಆರ್ಎಸ್‌ಪಿ ನಿರ್ಧಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಸಿಪಿಐ-ಎಂ, ಆರ್ಎಸ್‌ಪಿಯ ಹೆಜ್ಜೆಯನ್ನು ಅನುಸರಿಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಯುಪಿಎಯಲ್ಲಿ ಇರುವುದು ಅಥವಾ ಇಲ್ಲದಿರುವುದೂ ಎರಡೂ ಒಂದೇ ಆಗಿದೆ ಎಂದು ಹೇಳಿದರು.
ಮತ್ತಷ್ಟು
ಹೊಗೇನಕಲ್: ಕರ್ನಾಟಕದ ಬಿಗಿ ನಿಲುವು
ಪೆಟ್ರೋಲಿಯಂ ಬೆಲೆ ಏರಿಕೆ ಸನ್ನಿಹಿತ?
ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ
ನಕ್ಸಲರಿಂದ ರೈಲ್ವೇ ಹಳಿ ಸ್ಫೋಟ
ಅರುಶಿ ಕೊಲೆ: ಉ.ಪ್ರ ಪೊಲೀಸರ ವಿರುದ್ಧ ಕ್ರಮ
ಆಂಧ್ರ ಉಪಚುನಾವಣೆ: ಟಿಡಿಪಿ ಮುನ್ನಡೆ