ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದವನ್ನು ವಿರೋಧಿಸಿಲ್ಲ: ಬಿಜೆಪಿ  Search similar articles
ಅಮೆರಿಕದೊಂದಿಗಿನ ಅಣುಒಪ್ಪಂದವನ್ನು ತಾನು ವಿರೋಧಿಸಿಲ್ಲ, ಆದರೆ, ಒಪ್ಪಂದವನ್ನು ಪುನಾರಚಿಸಿದಲ್ಲಿ, ಭವಿಷ್ಯದಲ್ಲಿ ಅಣು ಪರೀಕ್ಷೆ ನಡೆಸಲು ಭಾರತದ ಮೇಲೆ ಯಾವುದೇ ನಿರ್ಬಂಧ ಇರದ ಕಾರಣ, ಒಪ್ಪಂದದ ಕರಡನ್ನು ಪುನಾರಚಿಸಲು ಬಯಸಿತ್ತು ಎಂದು ಎಂದು ಬಿಜೆಪಿ ಮಂಗಳವಾರ ಹೇಳಿದೆ.

ಮೂಲಭೂತವಾಗಿ ನಾವು ಅಣುಒಪ್ಪಂದವನ್ನು ವಿರೋಧಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ. ಅವರು ವಾಣಿಜ್ಯ ಸಂಘಟನೆ ಅಸೋಚ್ಚಮ್ ನಡೆಸಿದ್ದ ಸಮಾರಂಭವೊಂದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಮೆರಿಕದಿಂದ ಅಣು ಇಂಧನವನ್ನು ಪಡೆಯುವುದನ್ನು ಬಿಜೆಪಿ ವಿರೋಧಿಸುತ್ತಿಲ್ಲ, ಆದರೆ ಹೈಡ್ ಕಾಯ್ದೆಯಿಂದ ಭಾರತವನ್ನು ಪ್ರತ್ಯೇಕಿಸಲು ಅನುಕೂಲವಾಗುವಂತೆ 123 ಒಪ್ಪಂದವನ್ನು ಮರುರಚಿಸಲು ಬಯಸುತ್ತಿದೆ ಎಂದು ಹೇಳಿದರು.

ಒಪ್ಪಂದದಲ್ಲಿರುವ "ಇನ್ಯಾವುದೆ ಅಣು ಪರೀಕ್ಷೆಗಳು ಇರಬಾರದೆಂಬ ವಾಕ್ಯದ ಮೇಲಷ್ಟೆ ನಮ್ಮ ವಿರೋಧ" ಎಂದು ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಸ್ಪಷ್ಟಪಡಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಒಪ್ಪಂದದ ಕುರಿತು ಸಂಸತ್ತಿನಲ್ಲಿ ನೀಡಿರುವ ಭರವಸೆಗಳಿಗೆ ಬದ್ಧರಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ದೂರಿದರು.
ಮತ್ತಷ್ಟು
ಕೋಲ್ಕತಾ ಬುರ್ರಾಬಜಾರಿನಲ್ಲಿ ಮತ್ತೆ ಅಗ್ನಿ ತಾಂಡವ
ಪೆಟ್ರೋಲ್ ಬೆಲೆ ಏರಿಕೆ: ನಾಳೆ ಸಂಪುಟ ಸಭೆ
ಕರ್ನಾಟಕ ಸೋಲು ಪಕ್ಷಕ್ಕೆ ಹಿನ್ನಡೆ: ರಾಹುಲ್
ಇಡ್ಲಿ, ದೋಸೆ ಬೆಲೆ ಕಡಿತ: ಕರುಣಾನಿಧಿಗೆ ಬರ್ತ್‌ಡೇ ಗಿಫ್ಟ್!
ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿ 'ಸತ್ತಿದೆ'
ಹೊಗೇನಕಲ್: ಕರ್ನಾಟಕದ ಬಿಗಿ ನಿಲುವು