ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಚ ನೀಡಲು ಬಂದ ಸಚಿವನ ಬಂಧನ  Search similar articles
ರಾಜಕೀಯ ವಿರೋಧಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಮುಚ್ಚಿಹಾಕುವ ದುರುದ್ದೇಶದಿಂದ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ, ಅಸ್ಸಾಂ ಶಿಕ್ಷಣ ಖಾತೆ ಸಚಿವ ರಿಫುನ್ ಬೊರಾ ಎಂಬುವರನ್ನು ಮಂಗಳವಾರ ಬಂಧಿಸಿದೆ.

2000ನೇ ಸಾಲಿನಲ್ಲಿ ನಡೆದ ರಾಜಕೀಯ ವಿರೋಧಿಯೊಬ್ಬರ ಕೊಲೆ ಪ್ರಕರಣದಿಂದ ಪಾರಾಗುವ ಉದ್ದೇಶದಿಂದ ಸಿಬಿಐನ ಅಧಿಕಾರಿಯೊಬ್ಬರಿಗೆ ಲಂಚ ನೀಡುವ ಸಂದರ್ಭದಲ್ಲಿ ಸಚಿವ ರಿಫುನ್ ಬೊರಾ ಅವರನ್ನು ಪತ್ರಕರ್ತ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಕೊಲೆ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ತಮಗೆ ಸಚಿವ ಬೊರಾ ಅವರು ಹತ್ತು ಲಕ್ಷ ರೂಪಾಯಿ ಲಂಚ ನೀಡಲು ಬಂದಿದ್ದರು ಎಂದು ಸಿಬಿಐ ಅಧಿಕಾರಿಯೊಬ್ಬರು ಮಂಗಳವಾರ ಸಾಯಂಕಾಲ ದೂರು ನೀಡಿದ್ದರು.

ಈ ಆಪಾದನೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸಚಿವರ ವಜಾ ಶಿಫಾರಸ್ಸು: ಲಂಚ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೆ ಒಳಗಾಗಿರುವ ಶಿಕ್ಷಣ ಸಚಿವ ರಿಫುನ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗಾಯ್ ಅವರು ರಾಜ್ಯಾಪಾಲರಿಗೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲ ಅಜಯ್ ಸಿಂಗ್ ಅವರಿಗೆ ಪತ್ರವನ್ನು ಕಳುಹಿಸಿ, ಸಂಪುಟದಿಂದ ಬೊರಾ ಅವರನ್ನು ವಜಾಗೊಳಿಸುವಂತೆ ಶಿಫಾರಸ್ಸು ಮಾಡಿದ್ದಾರೆ.
ಮತ್ತಷ್ಟು
ಮೇಲ್ಮನೆಯ 8 ಸ್ಥಾನಗಳಿಗೆ ಜೂ.26ರಂದು ಚುನಾವಣೆ
ಚುನಾವಣಾ ಸೋಲು: ಚಂದ್ರಶೇಖರ್ ರಾಜೀನಾಮೆ
ಅಣುಒಪ್ಪಂದವನ್ನು ವಿರೋಧಿಸಿಲ್ಲ: ಬಿಜೆಪಿ
ಕೋಲ್ಕತಾ ಬುರ್ರಾಬಜಾರಿನಲ್ಲಿ ಮತ್ತೆ ಅಗ್ನಿ ತಾಂಡವ
ಪೆಟ್ರೋಲ್ ಬೆಲೆ ಏರಿಕೆ: ನಾಳೆ ಸಂಪುಟ ಸಭೆ
ಕರ್ನಾಟಕ ಸೋಲು ಪಕ್ಷಕ್ಕೆ ಹಿನ್ನಡೆ: ರಾಹುಲ್