ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಣಬ್ ನಾಲ್ಕುದಿನಗಳ ಚೀನ ಭೇಟಿ  Search similar articles
ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ನಾಲ್ಕುದಿನಗಳ ಚೀನ ಭೇಟಿಯನ್ನು ಬುಧವಾರ ಆರಂಭಿಸಲಿದ್ದಾರೆ.

ತಮ್ಮ ಈ ಅಧಿಕೃತ ಭೇಟಿಯ ವೇಳೆ ಮುಖರ್ಜಿ ಅವರು ಗಡಿ ವಿವಾದ ಸೇರಿದಂತೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರದ ಕುರಿತು ಮಾತುಕತೆ ನಡೆಸಲಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ 2005ರಲ್ಲಿ ಆಗಿರುವ ಮಾರ್ಗದರ್ಶಿ ಸೂತ್ರ ಒಪ್ಪಂದಗಳ ಪ್ರಕಾರ ಮತ್ತು ರಾಜಕೀಯ ಮಾನದಂಡಗಳಂತೆ ಗಡಿವಿವಾದದ ಮಾತುಕತೆಗಳು ಮುನ್ನಡೆಯಲಿವೆ.

ಇದರ ಹೊರತಾಗಿ ಟಿಬೆಟ್, ನೀರಾವರಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಣಬ್ ಭೇಟಿಯ ವೇಳೆ ಮಾತುಕತೆ ನಡೆಯಲಿದೆ.

2010ರ ವೇಳೆಗೆ 60 ಶತಕೋಟಿ ಡಾಲರ್ ವ್ಯಾಪಾರ ವಹಿವಾಟಿನ ಗುರಿಯನ್ನು ಹಮ್ಮಿಕೊಂಡಿರುವ ಉಭಯ ರಾಷ್ಟ್ರಗಳು, ವ್ಯವಹಾರ ವಿಸ್ತರಣೆಯ ಕುರಿತ ಹಾದಿಗಳ ಕುರಿತು ಚರ್ಚಿಸಲಿದ್ದಾರೆ.
ಮತ್ತಷ್ಟು
ಲಂಚ ನೀಡಲು ಬಂದ ಸಚಿವನ ಬಂಧನ
ಮೇಲ್ಮನೆಯ 8 ಸ್ಥಾನಗಳಿಗೆ ಜೂ.26ರಂದು ಚುನಾವಣೆ
ಚುನಾವಣಾ ಸೋಲು: ಚಂದ್ರಶೇಖರ್ ರಾಜೀನಾಮೆ
ಅಣುಒಪ್ಪಂದವನ್ನು ವಿರೋಧಿಸಿಲ್ಲ: ಬಿಜೆಪಿ
ಕೋಲ್ಕತಾ ಬುರ್ರಾಬಜಾರಿನಲ್ಲಿ ಮತ್ತೆ ಅಗ್ನಿ ತಾಂಡವ
ಪೆಟ್ರೋಲ್ ಬೆಲೆ ಏರಿಕೆ: ನಾಳೆ ಸಂಪುಟ ಸಭೆ