ಇಲ್ಲಿಗೆ ಸಮೀಪದ ಅಯ್ಯನ್‌ಪೆಟ್ಟಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಬುಧವಾರ ನೀಡಿರುವ ಅನಾಮಧೇಯ ಕರೆಗಳು ಶಾಲೆಗಳಲ್ಲಿ ಭಯಭೀತ ವಾತಾವರಣ ಸೃಷ್ಟಿಸಿತು.
ಮಹಿಳೆಯೊಬ್ಬಾಕೆ ಜಿಲ್ಲಾ ವಿಶೇಷ ಪೊಲೀಸ್ ಕಚೇರಿಗೆ ಕರೆಮಾಡಿದ್ದು ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ತಿಳಿಸಿದಳೆಂದು ಪೊಲೀಸರು ಹೇಳಿದ್ದಾರೆ. ತಕ್ಷಣ ಜಾಗೃತರಾಗಿರುವ ಶಾಲಾ ಪ್ರಾಧಿಕಾರಗಳು ಶಾಲೆಗೆ ರಜೆ ಸಾರಿದರು.
ಪೊಲೀಸ್ ಸಿಬ್ಬಂದಿಗಳು ಮತ್ತು ಬಾಂಬ್ ಪತ್ತೆ ಶ್ವಾನದಳವು ಶಾಲಾ ಆವರಣದಲ್ಲಿ ಶೋಧ ಕಾರ್ಯನಡೆಸಿತು. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ.
|