ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ಅನಿವಾರ್ಯ : ಪ್ರಧಾನಿ  Search similar articles
ಪ್ರೆಟ್ರೋಲಿಯಮ್ ವಸ್ತುಗಳ ಬೆಲೆ ಏರಿಕೆಯ ಕಾರಣ ಸಾಮಾನ್ಯ ನಾಗರಿಕ ಮತ್ತು ರಾಜಕೀಯ ನಾಯಕರಿಂದ ಟೀಕೆಗಳನ್ನು ಎದುರಿಸುತ್ತಿರುವ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ತೈಲ ಪೂರೈಕೆಯನ್ನು ಸತತವಾಗಿ ಕಾಯ್ದುಕೊಳ್ಳುವ ಉದ್ದೇಶದಿಂದ ತೈಲ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಲೆ ಏರಿಕೆಯ ಸಚಿವ ಸಂಪುಟದ ತೀರ್ಮಾನದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಏರುತ್ತಿರುವ ಆಮದು ವೆಚ್ಚವನ್ನು ಕಡೆಗಣಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರುವುದಕ್ಕೆ ಒಂದು ಮಿತಿ ಇದೆ, ವಿದೇಶಗಳಿಂದ ತೈಲ ಆಮದು ಮಾಡಿಕೊಳ್ಳಲು ಕೂಡ ನಮ್ಮ ಕಂಪನಿಗಳಲ್ಲಿ ಹಣ ಇಲ್ಲದಂತಹ ಪರಿಸ್ಥಿತಿ ಬೆಲೆ ಹೆಚ್ಚಳ ಮಾಡದಿದ್ದಲ್ಲಿ ಬಂದೊದಗಬಹುದು ಎಂದು ನುಡಿದರು.

ಯುಪಿಎ ಸರಕಾರ ತೆಗೆದುಕೊಂಡಿರುವ ಬೆಲೆ ಏರಿಕೆ ತೀರ್ಮಾನವು ಜನಪ್ರಿಯವಲ್ಲ ಎಂದು ಹೇಳಿದ ಅವರು, ಎಂದ ಸರಕಾರವು ಸಾಧಾರಣ ಮಟ್ಟದಲ್ಲಿ ತೈಲಬೆಲೆ ಏರಿಕೆಯನ್ನು ಮಾಡಿದೆ ಎಂದು ಬೆಲೆ ಏರಿಕೆಗೆ ಸರಕಾರದ ಎದುರಿಸಿದ ಅನಿವಾರ್ಯ ಪರಿಸ್ಥಿತಿಗಳೊಂದಿಗೆ ವಿವರಿಸಿದರು.

ಬೆಲೆ ಏರಿಕೆಯ ಬಿಸಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತೆರಿಗೆಗಳನ್ನು ಕಡಿತಗೊಳಿಸಿದ್ದು, ಪರಿಣಾಮವಾಗಿ 22,660 ಕೋಟಿ ರೂಗಳಷ್ಟು ಸರಕಾರದ ಆದಾಯದಲ್ಲಿ ಖೋತಾ ಬೀಳಲಿದೆ. ಇದರ ಜೊತೆಗೆ ರಾಜ್ಯ ಸರಕಾರಗಳು ಇಂಧನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಇಲ್ಲ ರದ್ದುಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಸರಕಾರ ಇಂಧನ ತೈಲ ಬೆಲೆಯನ್ನು ಹೆಚ್ಚಳದ ತೀರ್ಮಾನ ತೆಗೆದುಕೊಂಡ ಕೆಲವೇ ಗಂಟೆಗಳ ಅವಧಿಯಲ್ಲಿ ಪಶ್ಚಿಮ ಬಂಗಾಲದಲ್ಲಿನ ಎಡಪಕ್ಷದ ಸರಕಾರವು ಶೇ 5 ಮಾರಾಟ ತೆರಿಗೆಯನ್ನು ಕಡಿತಗೊಳಿಸಿದೆ.
ಮತ್ತಷ್ಟು
ತೈಲಬೆಲೆ ಏರಿಕೆ: ಎಡಪಕ್ಷಗಳ ಪ್ರತಿಭಟನೆ
ಗುಜ್ಜಾರರಿಗೆ ಬಿಜೆಪಿ ಭರವಸೆ ನೀಡಿಲ್ಲ: ಮಹೇಶ್ವರಿ
ತ.ನಾ ಶಾಲೆಗಳಲ್ಲಿ ಹುಸಿಬಾಂಬ್ ಬೆದರಿಕೆ
ಕಾಂಗ್ರೆಸ್ ಪುನಶ್ಚೇತನಕ್ಕೆ ಸಮಿತಿ ನೇಮಕ
ಪ್ರಣಬ್ ನಾಲ್ಕುದಿನಗಳ ಚೀನ ಭೇಟಿ
ಲಂಚ ನೀಡಲು ಬಂದ ಸಚಿವನ ಬಂಧನ