ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನದ ತೆರಿಗೆ ಇಳಿಕೆಗೆ ಸೋನಿಯಾ ತಾಕೀತು  Search similar articles
ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಪೆಟ್ಪೋಲಿಯಂ ಉತ್ಪನ್ನಗಳ ಮೇಲಿನ ಮಾರಟ ತೆರಿಗೆಯನ್ನು ಕಡಿತಗೊಳಿಸುವಂತೆ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ ತಾಕೀತು ಮಾಡಿದ್ದಾರೆ.

ಬೆಲೆ ಏರಿಕೆಯಿಂದ ಒಂದಿಷ್ಟು ಉಪಶಮನ ನೀಡುವಂತೆ ರಾಜ್ಯಗಳು ತಮ್ಮ ಧ್ವನಿ ಎತ್ತಿವೆ. ಪಶ್ಚಿಮ ಬಂಗಾಳವು ಶೇ.5ರಷ್ಟು ಮಾರಾಟ ತೆರಿಗೆಯನ್ನು ಕಡಿತಗೊಳಿಸಿದೆ. ಅಂತೆಯೇ ಮಹಾರಾಷ್ಟ್ರ ಮತ್ತು ಕೇರಳವೂ ಇದನ್ನು ಅನುಸರಿಸಲಿದೆ.

ಬಿಹಾರ ಸರಕಾರವು ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶಿಲ್ ಕೆ ಮೊದಿ ಹೇಳಿದ್ದಾರೆ.
ಹೆಚ್ಚಾಗಿರುವ ಮೊತ್ತದ ಮೇಲಿನ ಮಾರಾಟ ತೆರಿಗೆಯನ್ನು ಕಡಿತ ಮಾಡುವುದಾಗಿ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಹೆಚ್ಚಾಗಿರುವ ಕಾರಣ ರಾಷ್ಟ್ರದಲ್ಲಿಯೂ ಬುಧವಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲಾಗಿದೆ.
ಮತ್ತಷ್ಟು
ಜಾರ್ಖಂಡ್: ಮುಷ್ಕರ ನಿರತ ವೈದ್ಯರ ವಜಾ
ಬೆಲೆ ಏರಿಕೆ ಅನಿವಾರ್ಯ : ಪ್ರಧಾನಿ
ತೈಲಬೆಲೆ ಏರಿಕೆ: ಎಡಪಕ್ಷಗಳ ಪ್ರತಿಭಟನೆ
ಗುಜ್ಜಾರರಿಗೆ ಬಿಜೆಪಿ ಭರವಸೆ ನೀಡಿಲ್ಲ: ಮಹೇಶ್ವರಿ
ತ.ನಾ ಶಾಲೆಗಳಲ್ಲಿ ಹುಸಿಬಾಂಬ್ ಬೆದರಿಕೆ
ಕಾಂಗ್ರೆಸ್ ಪುನಶ್ಚೇತನಕ್ಕೆ ಸಮಿತಿ ನೇಮಕ