ಕೊಲೆ ನಡೆಯುವ ಅತ್ಯಾಚಾರ ನಡೆದಿಲ್ಲ ಎಂಬ ನೂತನ ವರದಿಯ ಹೇಳಿಕೆಯು, ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಕೀಲಿಂಗ್‌ಳ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಬ್ರಿಟನ್‌ನಿಂದ ತಮ್ಮ ಕುಟುಂಬಿಕರೊಂದಿಗೆ ಗೋವಾಕ್ಕೆ ರಜಾ ದಿನಗಳನ್ನು ಕಳೆಯಲು ಬಂದ ಸ್ಕಾರ್ಲೆಟ್ ಕೀಲಿಂಗ್‌ಳನ್ನು ಗೋವಾದ ಅಂಜುನಾ ಬೀಜ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿತ್ತಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಈ ನಿಟ್ಟಿನಲ್ಲಿ ಸ್ಕಾರ್ಲೆಟ್‌ಳ ತಾಯಿ ಫಿಯೋನಾ ಅವರು ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿದ್ದರು. ಬಳಿಕ ಗೋವಾ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಸ್ಕಾರ್ಲೆಟ್‌ಳ ದೇಹದ ಕೆಲವು ಅಂಗಾಂಗಳ ಪರೀಕ್ಷೆಯನ್ನಾಧರಿಸಿ ಈ ನೂತನ ವರದಿಯನ್ನು ತಯಾರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಫೆ ಬ್ರವರಿ 18ರಂದು ಗೋವಾದ ಅಂಜುನಾ ಬೀಜ್‌ನಲ್ಲಿ ನಡೆದ ಸ್ಕಾರ್ಲೆಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸ್ಯಾಮ್‌ಸನ್ ಡಿ'ಸೋಜಾನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಡಿಸೋಜಾ ವಿರುದ್ಧ ಶನಿವಾರವವ ಆರೋಪಪಟ್ಟಿಯನ್ನು ಸಲ್ಲಿಸಲು ನಿರ್ಧರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
|