ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2ನೆ ದಿನಕ್ಕೆ ಕಾಲಿಟ್ಟ 'ಪೆಟ್ರೋಲ್ ಪೊಲಿಟಿಕ್ಸ್'  Search similar articles
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ನಡೆಸುತ್ತಿರುವ ಬಂದ್ ಪಶ್ಚಿಮ ಬಂಗಾಳದಲ್ಲಿ ಎರಡನೆ ದಿನಕ್ಕೆ ಕಾಲಿಟ್ಟಿದೆ. ಎಡಪಕ್ಷಗಳು ಗುರುವಾರ ಬಂದ್ ಆಚರಿಸಿದ್ದರೆ, ತೃಣಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಭಾರತೀಯ ಸಮಾಜವಾದಿ ಏಕತೆ ಕೇಂದ್ರ(ಎಸ್‌ಯುಸಿಐ) ಶುಕ್ರವಾರ ಬಂದ್‌ಗೆ ಕರೆ ನೀಡಿವೆ.

ದ್ವಿತೀಯ ದಿನವಾದ ಇಂದಿನ ಮುಷ್ಕರವು ರೈಲು ಮತ್ತು ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದೆ. ಹೆಚ್ಚಿನೆಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಮುಚ್ಚಿದ್ದು, ಬಹುತೇಕ ನಿರ್ಜನವಾಗಿರುವ ರಸ್ತೆಗಳಲ್ಲಿ ಕೆಲವೇ ಕೆಲವೇ ವಾಹನಗಳು ಒಡಾಡುತ್ತಿವೆ.
PTI


ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ ಏಳು ಗಂಟೆಯವರೆಗೆ 15 ವಿಮಾನ ಹಾರಾಟ ಸಮಯವನ್ನು ಮುಂ ದೂಡಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಭಾರತೀಯ ಜನತಾ ಪಕ್ಷ ಕೂಡ 12ಗಂಟೆಗಳ ಕಾಲ ಬಂದ್‌‌ಗೆ ಕರೆ ನೀಡಿದೆ.

ತೈಲ ಬೆಲೆ ಏರಿಕೆಯಿಂದ ದಿನನಿತ್ಯದ ವಸ್ತುಗಳ ಬೆಲೆ ಮತ್ತಷ್ಟು ತುಟ್ಟಿಯಾಗುವ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಲಿದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಬೆಲೆಏರಿಕೆಯನ್ನು ಟೀಕಿಸಿದ್ದು, ತಮ್ಮಪಕ್ಷ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಕೂಡ ರಾಜ್ಯವ್ಯಾಪಿ ಬಂದ್‌‌ಗೆ ಕರೆ ನೀಡಿದೆ. ಒರಿಸ್ಸಾದಲ್ಲೂ ಬಂದ್ ಆಚರಿಸಲಾಗುತ್ತಿದೆ.
ಮತ್ತಷ್ಟು
ಇದೀಗ ಗುಜ್ಜಾರರೊಳಗೇ ಅಂತಃಕಲಹ
ಲೋಕ್‌ಸತ್ತಾ ಸಂಪಾದಕರ ಮನೆಮೇಲೆ ಕಲ್ಲು
ಸ್ಕಾರ್ಲೆಟ್‌ ಹತ್ಯೆ: ಪ್ರಕರಣಕ್ಕೆ ಹೊಸತಿರುವು
ಇಂಧನದ ತೆರಿಗೆ ಇಳಿಕೆಗೆ ಸೋನಿಯಾ ತಾಕೀತು
ಜಾರ್ಖಂಡ್: ಮುಷ್ಕರ ನಿರತ ವೈದ್ಯರ ವಜಾ
ಬೆಲೆ ಏರಿಕೆ ಅನಿವಾರ್ಯ : ಪ್ರಧಾನಿ