ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನಗತ್ಯ ವೆಚ್ಚ ಕಡಿತಗೊಳಿಸಿ: ಪ್ರಧಾನಿ  Search similar articles
ತೈಲಬೆಲೆ ಏರಿಕೆಯ ಬಿಸಿಯನ್ನು ತಣ್ಣಗೆಗೊಳಿಸುವ ನಿಟ್ಟಿನಲ್ಲಿ, ಮಾರಾಟ ತೆರಿಗೆ ಕಡಿತಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿರುವ ಬೆನ್ನಿಗೆ, ಅನಾವಶ್ಯಕವಾದ ವಿಮಾನಯಾನ ಮತ್ತು ವಿದೇಶಯಾತ್ರೆಗಳನ್ನು ರದ್ದುಗೊಳಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು, ಸಚಿವರುಗಳಿಗೆ ಕಟು ಸಂದೇಶ ನೀಡಿದ್ದಾರೆ.

PTI
ಸಚಿವ ಕಮಲ್‌‌ನಾಥ್ ಅವರು ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ ಮಾತುಕತೆ ನಡೆಸಲು ಪ್ಯಾರಿಸ್‌‌ನಲ್ಲಿದ್ದರೆ, ಶರದ್ ಪವಾರ್ ಅವರು ರೋಮ್‌‌ನಲ್ಲಿ ಹಾಗೂ ಪ್ರಫುಲ್ ಪಟೇಲ್ ಅವರು ಗುಂಡಿಯಾ ಮಹಾರಾಷ್ಟ್ರ ಪ್ರವಾಸದಲ್ಲಿದ್ದಾರೆ. ಆ ನಿಟ್ಟಿನಲ್ಲಿ ಪ್ರಧಾನಿಯವರು ಗುರುವಾರದಂದು ಸಚಿವ ಸಂಪುಟದ ಮಿತ್ರರಿಗೆ ವೆಚ್ಚವನ್ನು ಆದಷ್ಟು ಕಡಿಮೆಗೊಳಿಸುವ ಕುರಿತಾಗಿ ಪತ್ರವನ್ನು ಬರೆದಿದ್ದಾರೆ.

"ಅನಾವಶ್ಯಕವಾದ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗಿರುವುದ ನಮ್ಮ ನೈತಿಕ ಜವಾದ್ದಾರಿಯಾಗಿದೆ" ಎಂದು ಹೇಳಿರುವ ಪ್ರಧಾನಿ, ಅನಾವಶ್ಯಕವಾದ ವಿದೇಶಿ ಯಾತ್ರೆಯನ್ನು ನಿಲ್ಲಿಸಿ ಎಂದಿದ್ದಾರೆ. ಸರಕಾರಿ ವಾಹನಗಳನ್ನು ಯಾವುದೇ ಕಾರಣಕ್ಕೂ ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡಬಾರದಾಗಿಯೂ ಅವರು ಸೂಚನೆ ನೀಡಿದ್ದಾರೆ.

"ಏನೇ ಆಗಲಿ ಪ್ರಧಾನಿಯವರು ಬರೆದಿರುವ ಈ ಪತ್ರಕ್ಕೆ ಸಚಿವರು ಬದ್ದರಾಗಿರಬೇಕು. ಸಚಿವರು, ಅಧಿಕಾರಿಗಳು ಪ್ರಧಾನಿಯವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ" ಎಂದು ಪ್ರಿಯರಂಜನ್ ದಾಸ್‌‌‌ಮುನ್ಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
2ನೆ ದಿನಕ್ಕೆ ಕಾಲಿಟ್ಟ 'ಪೆಟ್ರೋಲ್ ಪೊಲಿಟಿಕ್ಸ್'
ಇದೀಗ ಗುಜ್ಜಾರರೊಳಗೇ ಅಂತಃಕಲಹ
ಲೋಕ್‌ಸತ್ತಾ ಸಂಪಾದಕರ ಮನೆಮೇಲೆ ಕಲ್ಲು
ಸ್ಕಾರ್ಲೆಟ್‌ ಹತ್ಯೆ: ಪ್ರಕರಣಕ್ಕೆ ಹೊಸತಿರುವು
ಇಂಧನದ ತೆರಿಗೆ ಇಳಿಕೆಗೆ ಸೋನಿಯಾ ತಾಕೀತು
ಜಾರ್ಖಂಡ್: ಮುಷ್ಕರ ನಿರತ ವೈದ್ಯರ ವಜಾ