ಕಿಡ್ನಿ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರನ್ನು ಇಲ್ಲಿನ ಬಾಂಬೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
76ರ ಹರೆಯದ ಸಿಂಗ್ ಅವರು ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯ ಮತ್ತು ಕಿಡ್ನಿ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಡೀನ್ ಬಿ.ಕೆ ಗೋಯೆಲ್ ತಿಳಿಸಿದ್ದಾರೆ.
ಮಾಮೂಲಿಯಾಗಿ ದೆಹಲಿಯ ಅಪೊಲೋ ಇಲ್ಲವೇ ಮುಂಬೈನ ಬಾಂಬೆ ಆಸ್ಪತ್ರೆಯಲ್ಲಿ ಡಯಾಲಿಸ್ ಚಿಕಿತ್ಸೆ ಪಡೆಯುವ ಸಿಂಗ್, ಕಿಬ್ಬೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವಕ್ಕಾಗಿ ಹೈದರಾಬಾದಿನಲ್ಲಿ ಚಿಕಿತ್ಸೆ ಪಡೆದಿದ್ದರು.
ಹೈದರಾಬಾದಿನಿಂದ ಹೃದಯ ಮತ್ತು ಕಿಡ್ನಿ ಚಿಕಿತ್ಸೆಗಾಗಿ ಅವರು ಇಲ್ಲಿ ಬಂದಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ.
|