ಮುಂಬೈ: ಮುಂಬೈ ಸರಣಿ ಸ್ಫೋಟದಲ್ಲಿನ ಪ್ರಮುಖ ಆರೋಪಿ ಅಬೂಸಲೇಂನ ವಿಚಾರಣೆಯು ಜೂನ್ 10 ರಿಂದ ಪುನಾರಂಭವಾಗಲಿದೆ. ಟಾಡಾ ನ್ಯಾಯಧೀಶ ಪಿ ಡಿ ಕೋಡೆ ಅವರ ವರ್ಗಾವಣೆಯಿಂದಾಗಿ ಸಲೇಂ ವಿಚಾರಣೆಗೆ ತಾತ್ಕಾಲಿಕ ತಡೆ ಉಂಟಾಗಿತ್ತು. ಇದೀಗ ನೂತನ ನ್ಯಾಯಧೀಶ ಡಿ.ಯು.ಮುಲ್ಲಾ ಅವರು ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.
ನ್ಯಾಯಮೂರ್ತಿ ಪಿ ಡಿ ಖೋಡೆ ಅವರು ನಾಸಿಕ್‌ಗೆ ವರ್ಗಾವಣೆಯಾದ ನಂತರ ಅಬೂಸಲೇಂ ಪ್ರಕರಣದ ವಿಚಾರಣೆಗೆ ಕಳೆದ ತಿಂಗಳಿಂದ ತಾತ್ಕಾಲಿಕವಾಗಿ ತಡೆಯುಂಟಾಗಿತ್ತು. ಇದೇ ವೇಳೆ ಅಬೂ ಸಲೇಂ ಪರ ವಕೀಲರು, ಮುಂದಿನ ತನಿಖೆಯನ್ನು ನೂತನ ನ್ಯಾಯಧಿಶರು ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಲೇಂನನ್ನು 2005ರಲ್ಲಿ ಪೋರ್ಚುಗಲ್‌ನಲ್ಲಿ ಬಂಧಿಸಲಾಗಿದಿದೆ. ಈತ 1993 ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳ ಸಾಗಾಟದ ಆರೋಪ ಎದುರಿಸುತ್ತಿದ್ದಾನೆ.
|