ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
13 ವರ್ಷಗಳ ಬಳಿಕ ಮಾಯಾ-ಮುಲಾಯಂ ಭೇಟಿ  Search similar articles
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರುಗಳು ಹದಿಮ‌ೂರು ವರ್ಷಗಳ ಸುದೀರ್ಘ ಅವಧಿಯ ಬಳಿಕ ಶುಕ್ರವಾರ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಇದು ಮುಂದಿನ ವರ್ಷದ ಪ್ರಧಾನ ಚುನಾವಣೆಗಳ ಕುರಿತು ಉಭಯ ನಾಯಕರ ಮುಂದಿನ ನಡೆಗಳ ಕುರಿತು ಊಹಾಪೋಹಗಳನ್ನು ಹುಟ್ಟುಹಾಕಿವೆ.

ರಾಜ್ಯದ ಮಾನವ ಹಕ್ಕುಗಳ ಆಯೋಗಕ್ಕೆ ನಾಮನಿರ್ದೇಶನವನ್ನು ಅಂತಿಮಗೊಳಿಸುವ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಉತ್ತರಪ್ರದೇಶದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಮುಖಾಮುಖಿಯಾಗಿದ್ದಾರೆ.

1995ರಲ್ಲಿ ಅವರ ಮೈತ್ರಿ ಮುರಿದು ಬಿದ್ದನಂತರ ಬದ್ಧವೈರಿಗಳಾಗಿದ್ದ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದರು. ಅದಲ್ಲದೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲೂ ನಿರಾಕರಿಸುತ್ತಿದ್ದರು.

ಮಾಧ್ಯಮ ಹಾಗೂ ಹಿರಿಯ ಅಧಿಕಾರಿಗಳು ಅಚ್ಚರಿ ಪಡುವಂತೆ ಮುಲಾಯಂ ಅವರು ಮಾಯಾವತಿಯವರ ಕಾಳಿದಾಸ್ ಮಾರ್ಗ್‌ನಲ್ಲಿರುವ ನಿವಾಸಕ್ಕೆ ಶುಕ್ರವಾರ ಮುಂಜಾನೆ ಭೇಟಿ ನೀಡಿ ನೆರೆದಿದ್ದವರ ಹುಬ್ಬುಗಳು ಮೇಲೇರುವಂತೆ ಮಾಡಿದರು.

ಆಯೋಗದ ಆಯ್ಕೆಗೆ ಮುಲಾಯಂ ಅವರು ವಿರೋಧ ಪಕ್ಷದ ನಾಯಕನ ನೆಲೆಯಲ್ಲಿ ಭಾಗವಹಿಸಿದ್ದರು. ವಿರೋಧ ಪಕ್ಷದ ನಾಯಕ ಆಯ್ಕಾ ಸಮಿತಿಯ ಸದಸ್ಯರಾದರೆ, ಮುಖ್ಯಮಂತ್ರಿ ಆಯೋಗದ ಮುಖ್ಯಸ್ಥರಾಗಿರುತ್ತಾರೆ.

ಸಭೆಯು ಸುಮಾರು 40 ನಿಮಿಷಗಳ ಕಾಲ ನಡೆಯಿತು. ಯಾದವ್ ಅವರು 1995ರಿಂದ ಮಾಯಾವತಿ ಅವರ ನಿವಾಸಕ್ಕೆ ಭೇಟಿ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಪೆಟ್ರೋಲ್ ರೂ.1, ಡೀಸೆಲ್ 50ಪೈ ಇಳಿಕೆ
ಜೂ.10ರಿಂದ ಅಬೂ ಸಲೇಂ ವಿಚಾರಣೆ ಪುನಾರಂಭ
ಹಣದುಬ್ಬರ: ಪ್ರಧಾನಿ ರಾಜೀನಾಮೆಗೆ ಬಿಜೆಪಿ ಒತ್ತಾಯ
ಮಾಜಿ ಪ್ರಧಾನಿ ವಿಪಿ ಸಿಂಗ್ ಆಸ್ಪತ್ರೆಗೆ ದಾಖಲು
ಅನಗತ್ಯ ವೆಚ್ಚ ಕಡಿತಗೊಳಿಸಿ: ಪ್ರಧಾನಿ
2ನೆ ದಿನಕ್ಕೆ ಕಾಲಿಟ್ಟ 'ಪೆಟ್ರೋಲ್ ಪೊಲಿಟಿಕ್ಸ್'