ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರಕ್ಕೇನು ಬೇಕೆಂದು ಪಾಕ್ ಚಿಂತಿಸಲಿ: ಮಿರ್ವಾಯಿಜ್  Search similar articles
ಕಾಶ್ಮೀರದಿಂದ ಏನನ್ನು ಪಡೆಯಬಹುದು ಎಂಬುದಕ್ಕಿಂತ, ಕಾಶ್ಮೀರ ಜನತೆಯ ಹಿತಾಸಕ್ತಿ ಏನು ಎಂಬುದಾಗಿ ಪಾಕಿಸ್ತಾನ ಚಿಂತಿಸುವ ಕಾಲ ಪಕ್ವವಾಗಿದೆ ಎಂದು ಹುರಿಯತ್ ಕಾನ್ಫರೆನ್ಸ್‌ ಅಧ್ಯಕ್ಷ ಉಮರ್ ಫಾರೂಕ್ ಹೇಳಿದ್ದಾರೆ.

ಕಾಶ್ಮೀರ ವಿಚಾರವನ್ನು ಬದಿಗಿಡುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಕಾಶ್ಮೀರದಿಂದ ಪಾಕಿಸ್ತಾನವು ಏನನ್ನು ಪಡೆಯುತ್ತದೆ ಎಂಬುದಕ್ಕಿಂತ, ಕಾಶ್ಮೀರದ ಹಿತಾಸಕ್ತಿ ಕುರಿತಂತೆ ಪಾಕಿಸ್ತಾನವು ಚಿಂತಿಸುವ ಕಾಲ ಪಕ್ವವಾಗಿದೆ ಎಂಬುದಾಗಿ ನಾವು ಕಾಶ್ಮೀರಿಗಳು ನಂಬುತ್ತೇವೆ ಎಂಬ ದೃಷ್ಟಿಕೋನವನ್ನು ಹುರಿಯತ್ ಕಾನ್ಫರೆನ್ಸ್" ಯಾವತ್ತೂ ಹೊಂದಿರುತ್ತದೆ" ಎಂದು ಹೇಳಿದ್ದಾರೆ.

ಸಿಎನ್ಎನ್-ಐಬಿಎನ್ ವಾಹಿನಿಯ ಡೆವಿಲ್ಸ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಫಾರೂಕ್, "ಪಾಕಿಸ್ತಾನ ಸೇನೆಯು ಪ್ರಮುಖ ಅಂಶವಾಗಿದ್ದು, ಕಾಶ್ಮೀರ ನೀತಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ನೀತಿಯಲ್ಲಿ ಯಾವುದೇ ಬದಲಾವಣೆಯು ಸೇನೆಯನ್ನು ಸಂಪರ್ಕಿಸದೆ ಮಾಡಲು ಸಾಧ್ಯವಿಲ್ಲ" ಎಂದು ನುಡಿದರು.

ಪಾಕಿಸ್ತಾನದಲ್ಲಿರುವ ಪ್ರಮುಖ ಅಂಶವೆಂದರೆ ಸೇನೆ. ಹಾಗಾಗಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡಬೇಕಿದ್ದರೂ ಅದನ್ನು ಸೇನೆಯ ಸಮಾಲೋಚನೆಯ ಬಳಿಕವೇ ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.
ಮತ್ತಷ್ಟು
ತ.ನಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ರಾಜ್‌ಕೋಟ್: ವಿಷಕಾರಿ ಅನಿಲಸೋರಿಕೆ; 6 ಸಾವು
ಮಾತುಕತೆ ಮೇಜಿಗೆ ಮರಳಿದ ಗುಜ್ಜಾರರು
13 ವರ್ಷಗಳ ಬಳಿಕ ಮಾಯಾ-ಮುಲಾಯಂ ಭೇಟಿ
ಪೆಟ್ರೋಲ್ ರೂ.1, ಡೀಸೆಲ್ 50ಪೈ ಇಳಿಕೆ
ಜೂ.10ರಿಂದ ಅಬೂ ಸಲೇಂ ವಿಚಾರಣೆ ಪುನಾರಂಭ