ರಾಜಸ್ಥಾನದ ಭಾರತ್‌ಪುರ್ ಜಿಲ್ಲೆಯ ಬಯಾನದಲ್ಲಿ ಗುಜ್ಜಾರ್ ಸಮುದಾಯದೊಂದಿಗಿನ ಭೇಟಿಗೆ ರಾಜಸ್ಥಾನ ಸರಕಾರ ನಿರಾಕರಿಸಿದೆ. ಬದಲಿಗೆ, ಸರಕಾರದೊಂದಿಗೆ ಮಾತುಕತೆ ಬಯಸುವುದಾದಲ್ಲಿ ಚಳುವಳಿ ನಿರತ ಸಮುದಾಯದ ಮುಖಂಡರು ಜೈಪುರಕ್ಕೆ ಬರಲಿ ಎಂಬ ಪ್ರಸ್ತಾಪವಿಟ್ಟಿದೆ.
ಸರಕಾರಿ ಪ್ರತಿನಿಧಿಗಳೊಂದಿಗೆ ಮಾತುಕತೆಗಾಗಿ ಸಮುದಾಯದ 50 ಪ್ರತಿನಿಧಿಗಳ ಸಮಿತಿಯೊಂದನ್ನು ಗುಜ್ಜಾರರು ಶವಿವಾರ ಮುಂಜಾನೆ ರೂಪಿಸಿರುವ ಗಂಟೆಗಳ ಬಳಿಕ ವಸುಂಧರಾ ರಾಜೇ ಸರಕಾರದ ನಿರಾಕರಣೆ ಹೊರಬಿದ್ದಿದೆ.
ಗುಜ್ಜಾರರು ಬಯಾನದಲ್ಲಿ ಸರಕಾರದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಮಾಧ್ಯಮದ ಮೂಲಕ ಸರಕಾರಕ್ಕೆ ಸಂದೇಶ ಕಳುಹಿಸಿದ್ದರು. ಬಯಾನದಲ್ಲೇ ಮಾತುಕತೆ ನಡೆಯಬೇಕು ಎಂದು ಗುಜ್ಜಾರ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ನೀಡಿದ ಹೇಳಿಕೆ ಬಳಿಕ ಸಮುದಾಯವು ಮಾತುಕತೆಗೆ ಸಿದ್ಧವಿರುವುದಾಗಿ ಸರಕಾರಕ್ಕೆ ಪತ್ರಬರೆದಿತ್ತು.
ಆದರೆ, ಉನ್ನತ ಮಟ್ಟದ ಸಭೆಯ ಬಳಿಕ ಸರಕಾರವು ಬಯಾನಕ್ಕೆ ಮಾತುಕತೆಗೆ ತೆರಳದಿರಲು ನಿರ್ಧರಿಸಿದೆ. ಬದಲಿಗೆ ತನ್ನ ರಾಯಭಾರಿಗಳನ್ನು ಮಾತುಕತೆಗಾಗಿ ಜೈಪುರಕ್ಕೆ ಕಳುಹಿಸಲು ಭೈಂಸ್ಲಾರಿಗೆ ತಿಳಿಸಿದೆ.
|