ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜ್ಜರ್: ರಾಜ್ಯದ ಮನವಿಗೆ ಕೇಂದ್ರ ನಕಾರ  Search similar articles
ನವದೆಹಲಿ : ಅಲೆಮಾರಿ ಪಂಗಡಕ್ಕೆ ಸವಿಂಧಾನದಲ್ಲಿ ಸ್ಥಾನಮಾನ ನೀಡಲು ರಾಜ್ಯ ಸರಕಾರಕ್ಕೆ ಅವಕಾಶವಿದ್ದು, ಈ ನಿಟ್ಟಿನಲ್ಲಿ ಗುಜ್ಜಾರ್ ಸಮುದಾಯದ ಬೇಡಿಕೆಯನ್ನು ಈಡೇರಿಸುವಲ್ಲಿ ರಾಜಸ್ತಾನ ಸರಕಾರ ತನ್ನದೇ ಆದ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿರುವ ಕೇಂದ್ರ ಸರಕಾರ, ಚೆಂಡನ್ನು ಮರಳಿ ರಾಜಸ್ತಾನ ಸರಕಾರದ ಅಂಗಳಕ್ಕೆ ಹಾಕಿದೆ.

ಮುಖ್ಯಮಂತ್ರಿ ವಸುಂಧರಾ ರಾಜೆಗೆ ಬರೆದ ಪತ್ರದಲ್ಲಿ ಆದಿವಾಸಿ ವ್ಯವಹಾರಗಳ ಸಚಿವ ಪಿ ಆರ್ ಕಿನ್ಡಿಯಾ, ಸರಕಾರಕ್ಕೆ ಲಭ್ಯವಾದ ಕಾನೂನು ಸಲಹೆಯಂತೆ, ಸಂವಿಧಾನ ರಾಜ್ಯ ಸರಕಾರಗಳಿಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹೊರತು ಪಡಿಸಿ ಅಲೆಮಾರಿ ಮತ್ತು ಅಧಿಸೂಚಿತವಲ್ಲದ ಪಂಗಡಗಳಿಗೆ ಮೀಸಲಾತಿ ನೀಡುವ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸಕ್ತವಿರುವ ಸಂವಿಧಾನ ನಿಬಂಧನೆಗಳಂತೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹೊರತು ಪಡಿಸಿದ ವಿಭಾಗಗಳಿಗೆ ವಿಶೇಷ ಉಪ ಬಂಧಗಳನ್ನು ಮಾಡಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ, ಈ ಉದ್ದೇಶಕ್ಕಾಗಿ ಸಂವಿಧಾನದಲ್ಲಿ ಯಾವುದೇ ತಿದ್ಧುಪಡಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಈ ಪತ್ರದಲ್ಲಿ ಕೇಂದ್ರ ಸರಕಾರ ಬಹು ದಿನಗಳ ಹಿಂದೆ ಅಲೆಮಾರಿ ಮತ್ತು ಅಧಿಸೂಚಿತವಲ್ಲದ ಪಂಗಡಗಳಿಗೆ ನಾಲ್ಕು ಶೇಕಡಾ ಮೀಸಲಾತಿ ನೀಡಿರುವ ಮಹಾರಾಷ್ಟ್ರ ಸರಕಾರದ ಉದಾಹರಣೆಯನ್ನು ನೀಡಿದೆ.
ಮತ್ತಷ್ಟು
ಒರಿಸ್ಸಾ: ನಕ್ಸಲರಿಂದ ಬಿಜೆಡಿ ನಾಯಕನ ಹತ್ಯೆ
ಗುಜ್ಜಾರ್: ಬಯಾನದಲ್ಲಿ ಭೇಟಿಗೆ ಸರಕಾರ ನಕಾರ
ಕಾಶ್ಮೀರಕ್ಕೇನು ಬೇಕೆಂದು ಪಾಕ್ ಚಿಂತಿಸಲಿ: ಮಿರ್ವಾಯಿಜ್
ತ.ನಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ರಾಜ್‌ಕೋಟ್: ವಿಷಕಾರಿ ಅನಿಲಸೋರಿಕೆ; 6 ಸಾವು
ಮಾತುಕತೆ ಮೇಜಿಗೆ ಮರಳಿದ ಗುಜ್ಜಾರರು