ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಗೆ ಬಿಜೆಪಿ ಸದಾ ಸಿದ್ದ-ಅಡ್ವಾಣಿ  Search similar articles
ಲೋಕಸಭೆ ಚುನಾವಣೆಯನ್ನು ಈಗಲೇ ನಡೆಸಿದರೂ ಭಾರತೀಯ ಜನತಾ ಪಕ್ಷವು ಅದನ್ನು ಎದುರಿಸಲು ಸಿದ್ಧವಾಗಿದೆ ಎಂದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ.

ಆವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಯುಪಿಎ ಸರಕಾದ ಆಡಳಿತದ ಬಗ್ಗೆ ದೇಶದ ಜನತೆಗೆ ಬೇಸರ ಉಂಟಾಗಿದೆ ಎಂದು ಅಡ್ವಾಣಿ ಅಭಿಪ್ರಾಯಪಟ್ಟರು.

ಕಳೆದ ನಾಲ್ಕು ವರ್ಷಗಳಲ್ಲಿ ಬೆಲೆ ಏರಿಕೆ ಬಿಸಿಯಿಂದ ಜನತೆಯು ತತ್ತರಿಸಿ ಹೋಗಿದ್ದು, ಯುಪಿಎ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಸಿ ಜನತೆಯ ಆಕ್ರೋಶದ ಬೆಂಕಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೊಳಿಸಿದ ಯುಪಿಎ ಸರಕಾರವನ್ನು ಕಟುವಾಗಿ ಟೀಕಿಸಿದರು.

ಎನ್‌ಡಿಎ ಸರಕಾದ ಅವಧಿಯಲ್ಲಿಯೂ ಕಚ್ಛಾತೈಲ ಬೆಲೆ ಏರಿಕೆಗೊಂಡಿತ್ತು. ಆದರೆ, ಎನ್‌ಡಿಎ ಸರಕಾರವು ಇದನ್ನು ಸಾಮಾನ್ಯ ಜನರ ಮೇಲೆ ಹೊರಿಸದೆ ಸರಕಾರವೇ ಹೊತ್ತುಕೊಂಡಿತ್ತು ಎಂದು ನುಡಿದರು.

ಅಷ್ಟು ಮಾತ್ರವಲ್ಲದೆ, ಪೆಟ್ರೋಲಿಂ ಉತ್ಪನ್ನಗಳ ಮೇಲಿನ ಸ್ಥಳೀಯ ತೆರಿಗೆಯನ್ನು ಕಡಿತಗೊಳಿಸ ಸ್ವಲ್ಪ ಮಟ್ಟಿನ ಪೆಟ್ರೋಲ್ ಬೆಲೆ ಬಿಸಿಯನ್ನು ಶಮನಗೊಳಿಸುವಂತೆ ಬಿಜೆಪಿ ಆಡಳಿತವನ್ನು ಹೊಂದಿದೆ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮತ್ತಷ್ಟು
ಗುಜ್ಜರ್: ರಾಜ್ಯದ ಮನವಿಗೆ ಕೇಂದ್ರ ನಕಾರ
ಒರಿಸ್ಸಾ: ನಕ್ಸಲರಿಂದ ಬಿಜೆಡಿ ನಾಯಕನ ಹತ್ಯೆ
ಗುಜ್ಜಾರ್: ಬಯಾನದಲ್ಲಿ ಭೇಟಿಗೆ ಸರಕಾರ ನಕಾರ
ಕಾಶ್ಮೀರಕ್ಕೇನು ಬೇಕೆಂದು ಪಾಕ್ ಚಿಂತಿಸಲಿ: ಮಿರ್ವಾಯಿಜ್
ತ.ನಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ರಾಜ್‌ಕೋಟ್: ವಿಷಕಾರಿ ಅನಿಲಸೋರಿಕೆ; 6 ಸಾವು