ಅಮರನಾಥ ಯಾತ್ರೆಯು ಜೂನ್ 18ರಿಂದ ಆರಂಭವಾಗಲಿದ್ದು, ರಾಷ್ಟ್ರಾದ್ಯಂತ ವಿವಿಧ ಕೇಂದ್ರಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಯಾತ್ರಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ.
"ಇದುವರೆಗೆ 2,00,013 ಯಾತ್ರಿಕರು ತಮ್ಮ ಹೆಸರು ನೋಂದಾಯಿಸಿದ್ದಾರೆ" ಎಂಬುದಾಗಿ ಜಮ್ಮು ಕಾಶ್ಮೀರ ಬ್ಯಾಂಕಿನ ಮೂಲಗಳು ತಿಳಿಸಿವೆ. ಈ ಬ್ಯಾಂಕು ರಾಷ್ಟ್ರಾದ್ಯಂತ ನೋಂದಣಿ ಪ್ರಕ್ರಿಯೆಯ ಉಸ್ತುವಾರಿ ವಹಿಸಿದೆ.
ರಾಷ್ಟ್ರಾದ್ಯಂತ ವಿವಿಧ ರಾಜ್ಯಗಳಲ್ಲಿ ಮೇ 2ರಿಂದ ನೋಂದಣಿ ಆರಂಭವಾಗಿದ್ದು, ಜೂನ್ 13ಕ್ಕೆ ನೋಂದಣಿ ಅಂತ್ಯಗೊಳ್ಳಲಿದೆ. ಬ್ಯಾಂಕು ಯಾತ್ರಿಕರಿಗೆ ರೂ.15 ನೊಂದಣಿ ಶುಲ್ಕ ವಿಧಿಸುತ್ತದೆ.
|