ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಷಿ: ಸಿಬಿಐನಿಂದ ತಲ್ವಾರ್ ನಿವಾಸ ಶೋಧ  Search similar articles
ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ಬೆರಳಚ್ಚು ತಜ್ಞರ ತಂಡವೊಂದು ಸೋಮವಾರ ತಡರಾತ್ರಿ ರಾಜೇಶ್ ತಲ್ವಾರ್ ಮನೆಯಲ್ಲಿ ಮತ್ತೆ ಶೋಧ ಕಾರ್ಯ ನಡೆಸಿದೆ.

ರಾಜೇಶ್ ಪುತ್ರಿ ಅರುಷಿ ಹಾಗೂ ಆತನ ಮನೆಯಾಳು ಹೇಮರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜೇಶ್‌ನ ಕಾಂಪೌಂಡರ್ ಕೃಷ್ಣನೊಂದಿಗೆ ರಾತ್ರಿ ಸುಮಾರು 11.45ರ ವೇಳೆಗೆ ನೋಯ್ಡಾದಲ್ಲಿರುವ ರಾಜೇಶ್ ನಿವಾಸದಲ್ಲಿ ಶೋಧಕಾರ್ಯ ನಡೆಸಲಾಗಿದೆ.

ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಸುವ ಮುನ್ನ ಕಾಂಪೌಂಡರ್ ಕೃಷ್ಣನನ್ನು ಆರು ಗಂಟೆಗಳ ಕಾಲ ಸುಳ್ಳುಪತ್ತೆ ಪರೀಕ್ಷೆಗೆ ಒಡ್ಡಲಾಗಿತ್ತು. ಕೊಲೆಗೀಡಾಗಿರುವ ಹೇಮರಾಜ್ ಕೋಣೆಯಲ್ಲಿ ಕೆಲವು ಸುಳಿವು ಪತ್ತೆಯಾಗಿದೆ ಎಂದು ಸಿಬಿಐ ಹೇಳಿದೆ.

ಅರುಷಿಯ ಕೊಲೆಯಾದ ಮೇ15ರಂದು ಹೇಮರಾಜ್ ಕೊಠಡಿಯಲ್ಲಿ ಮೂವರು ಕುಳಿತು ಮದ್ಯಸೇವಿಸಿರುವ ಕುರುಹುಗಳು ಲಭ್ಯವಾಗಿವೆ. ಇದರಲ್ಲೊಬ್ಬ ಕೃಷ್ಣನಾಗಿದ್ದು ಮೂರನೆಯ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ತನಿಖಾದಳದ ಮೂಲಗಳು ಹೇಳಿವೆ.
ಮತ್ತಷ್ಟು
ಬಂದ್ ಹಿಂತೆಗೆತ; ಸಂಧಾನಕ್ಕೆ ಗುಜ್ಜಾರ್ ಒಪ್ಪಿಗೆ
ದಿನನಿತ್ಯ ಸಾಯೋದಕ್ಕಿಂತ ಗಲ್ಲು ಲೇಸು: ಅಫ್ಜಲ್
ಅಮರನಾಥ ಯಾತ್ರೆಗೆ 2 ಲಕ್ಷ ದಾಟಿದ ನೋಂದಣಿ
ಅಣ್ವಸ್ತ್ರಗಳು ಭಯೋತ್ಪಾದಕರ ಕೈಗೆ: ಪ್ರಧಾನಿ ಕಳವಳ
ಮಾತುಕತೆಗೆ 2 ಸಚಿವರನ್ನು ಗೊತ್ತುಮಾಡಿದ ರಾಜೆ
ಉ.ಪ್ರ. ಕೊಲೆ ಆರೋಪಿ ಸಚಿವ ವಜಾ