ಭಾರತದ ಗಡಿ ಕುರಿತು ಚೀನದ ಹೇಳಿಕೆ ಮತ್ತು ಚೀನ ಆಕ್ರಮಣ ಕುರಿತ ಇತ್ತೀಚಿನ ವರದಿಗಳ ನಡುವೆಯೇ, ಭಾರತವು ತನ್ನ ನೆರೆಹೊರೆಯೊಂದಿಗೆ ಯಾವುದೇ ವಿರೋಧವನ್ನು ಬಯಸುತ್ತಿಲ್ಲ ಎಂದು ಹೇಳಿದೆ.
ನಾವು ಈ ಘಟನೆಗಳನ್ನು ನಿರ್ಲಕ್ಷ್ಯಿಸುವುದಿಲ್ಲ. ಆದರೆ ಸಾಧ್ಯವಾದಷ್ಟು ಮಟ್ಟಿಗೆ ನಾವು ಸಾಧ್ಯವಿರುವ ಎಲ್ಲಾ ವಿರೋಧಗಳಿಂದ ದೂರವಿರಬಯಸುತ್ತೇವೆ ಎಂದು ಆಂಟನಿ ಹೇಳಿದ್ದಾರೆ. ಮೂರೂ ಸೇನಾದಳದಿಂದ ಆಯ್ದ ಸಮಗ್ರ ರಕ್ಷಣಾ ಸಿಬ್ಬಂದಿಗಳ ಉನ್ನತ ಸಮ್ಮೇಳನದ ಉದ್ಘಾಟನಾ ಸಂದರ್ಭದಲ್ಲಿ ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದೊಂದು ವರ್ಷದಿಂದ ಚೀನದ ಜನತಾ ಮುಕ್ತಿ ಸೇನೆ(ಪಿಎಲ್ಎ)ಯ ಪಡೆಗಳು ಭಾರತದೊಳಕ್ಕೆ 150ಕ್ಕಿಂತಲೂ ಹೆಚ್ಚು ಆಕ್ರಮಣಗಳನ್ನು ಮಾಡಿರುವುದು ವರದಿಯಾಗಿದೆ. ಇಲ್ಲದೆ, ಇದುವರೆಗೆ ತೀರ್ಮಾನಗೊಂಡಿದೆ ಎಂದು ಊಹಿಸಲಾಗಿದ್ದ ಉತ್ತರ ಸಿಕ್ಕಿಂನ 'ಫಿಂಗರ್ ಏರಿಯಾ'ದ ಮೇಲಿನ ವಿವಾದ ಸೇರಿದಂತೆ ಭಾರತೀಯ ಪ್ರದೇಶದ ಮೇಲೆ ಚೀನದ ಹಕ್ಕುಮಂಡನೆಗೆ ಪ್ರಯತ್ನಿಸುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಇತ್ತೀಚೆಗೆ ಚೀನಗೆ ಭೇಟಿ ನೀಡಿದ್ದ ವೇಳೆಗೂ, ಫಿಂಗರ್ ಏರಿಯಾ ಕುರಿತು ಪ್ರಸ್ತಾಪಿಸಲು ಚೀನ ಪ್ರಯತ್ನಿಸಿತ್ತು ಎನ್ನಲಾಗಿದೆ.
ಸುದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಚೀನದೊಂದಿಗಿನ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ತೊಡಗಿದ್ದೇವೆ, ಮತ್ತು ಪ್ರಕ್ರಿಯೆ ಮುಂದುವರಿದಿದೆ ಎಂದು ಆಂಟನಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆಯ ಕುರಿತು ಯುಪಿಎ ಸರಕಾರವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ನುಡಿದರು. ಚೀನ ಗಡಿ ಪ್ರದೇಶದ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿನ ರಕ್ಷಣಾ ಸಿಬ್ಬಂದಿಗಳನ್ನು ಇತ್ತೀಚೆಗೆ ಭೇಟಿಮಾಡಿರುವ ರಕ್ಷಣಾ ಸಚಿವರು, ಭಾರತವು ಯಾವುದೇ ಸವಾಲುಗಳನ್ನು ಸ್ವೀಕರಿಸಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ನುಡಿದರು.
|