ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಪ್ರ ಕೊಲೆ ಆರೋಪಿ ಸಚಿವ ಬಂಧನ  Search similar articles
ಲಕ್ನೋ: ಪೊಲೀಸ್ ಪೇದೆಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಮೀನುಗಾರಿಕೆ ಇಲಾಖೆಯ ಮಾಜಿ ರಾಜ್ಯ ಸಚಿವ ಜಮುನಾ ನಿಶಾದ್ ಅವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವ ಬಳಿಕ ನಿಶಾದ್ ಬಂಧನಕ್ಕೀಡಾಗಿದ್ದಾರೆ.

ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಸಚಿವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಪೊಲೀಸ್ ಪೇದೆಯೊಬ್ಬ ಮೃತಪಟ್ಟಿದ್ದು, ಸಚಿವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಪ್ರಕರಣದ ಕುರಿತು ಮ್ಯಾಜಸ್ಟ್ರೀಟ್ ತನಿಖೆನ್ನೂ ಮಾಯಾವತಿ ಆದೇಶಿಸಿದ್ದಾರೆ. ಆರೋಪಿ ಸಚಿವರನ್ನು ಭಾನುವಾರ ತನ್ನ ನಿವಾಸಕ್ಕೆ ಮಾಯಾವತಿ ಕರೆಸಿದ್ದು ಈ ವೇಳೆ, ಸಚಿವರು ರಾಜೀನಾಮೆ ನೀಡಿದ್ದರು.

ಘರ್ಷಣೆಯಲ್ಲಿ ಮೃತನಾದ ಪೊಲೀಸ್ ಕುಟುಂಬಕ್ಕೆ ಉದ್ಯೋಗ ಭರವಸೆ ಹಾಗೂ 24 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಇದಲ್ಲದೆ, ಮೃತರ ಇಬ್ಬರು ಹೆಣ್ಣುಮಕ್ಕಳಿಗೆ ತಲಾ ಐದು ಲಕ್ಷ ರೂಪಾಯಿ ನಿರಕು ಠೇವಣಿಯನ್ನೂ ಸರಕಾರ ಒದಗಿಸಿದೆ.

ಪ್ರಕರಣ ಕುರಿತಂತೆ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ ನಿಶಾದ್ ಹಾಗೂ ಅವರ 50 ಬೆಂಬಲಿಗರನ್ನು ಹೆಸರಿಸಲಾಗಿದೆ. ಇವರ ವಿರುದ್ಧ ಭಾರತೀಯ ಡಂಡ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಕೊಲೆ ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಅತ್ಯಾಚಾರ ಪ್ರಕರಣದ ಶಂಕಿತನೊಬ್ಬನ ಬಿಡುಗಡೆಯನ್ನು ಪ್ರತಿಭಟಿಸುತ್ತಿದ್ದ ವೇಳೆಗೆ ಪೊಲೀಸರು ಮತ್ತು ಸಚಿವರ ಬೆಂಬಲಿಗರ ನಡುವೆ ಘರ್ಷಣೆಯಂಟಾಗಿದ್ದು, ಈ ವೇಳೆ ಪೊಲೀಸ್ ಹತರಾಗಿದ್ದಾರೆ. ಪ್ರತಿಭಟನಾಕಾರರು ಮಹಾರಾಜ್ ಗಂಜ್‌ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿದ್ದರು ಎಂದೂ ಹೇಳಲಾಗಿದೆ.
ಮತ್ತಷ್ಟು
ಠಾಣೆ ಹೊರಗಡೆ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಬಲಿಪಶು
ಭಾರತ ಚೀನದೊಂದಿಗೆ ವಿರೋಧ ಬಯಸದು: ಆಂಟನಿ
ಅರುಷಿ: ಸಿಬಿಐನಿಂದ ತಲ್ವಾರ್ ನಿವಾಸ ಶೋಧ
ಬಂದ್ ಹಿಂತೆಗೆತ; ಸಂಧಾನಕ್ಕೆ ಗುಜ್ಜಾರ್ ಒಪ್ಪಿಗೆ
ದಿನನಿತ್ಯ ಸಾಯೋದಕ್ಕಿಂತ ಗಲ್ಲು ಲೇಸು: ಅಫ್ಜಲ್
ಅಮರನಾಥ ಯಾತ್ರೆಗೆ 2 ಲಕ್ಷ ದಾಟಿದ ನೋಂದಣಿ