ಮಂಗಳವಾರ 2006ರ ಸಾಲಿನ 54ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ಮೂರು ಕನ್ನಡಚಿತ್ರಗಳು ಪ್ರಶಸ್ತಿಗೆ ಭಾಜನವಾಗಿವೆ.
ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳು |
| ಮೂರು ಕನ್ನಡ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿವೆ. ಉತ್ತಮ ಭಾವೈಕ್ಯತಾ ಪ್ರಶಸ್ತಿ ಟಿ.ಎಸ್. ನಾಗಾಭರಣ್ ನಿರ್ದೇಶನದ ಕಲ್ಲರಳಿ ಹೂವಾಗಿ ಚಿತ್ರಕ್ಕೆ ಲಭಿಸಿದರೆ, ಕಾಡಬೆಳದಿಂಗಳು ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂಬ ಹೆಗ್ಗಳಿಕೆ ಪಡೆದಿದೆ. ಮಾಸ್ಟರ್ ಕಿಶನ್ ರ್ದೇಶನದ ಕೇರಾಫ್ ಫುಟ್ಪಾತ್ ಚಿತ್ರ |
| |
ಮೂರು ಕನ್ನಡ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿವೆ. ಉತ್ತಮ ಭಾವೈಕ್ಯತಾ ಪ್ರಶಸ್ತಿ ಟಿ.ಎಸ್. ನಾಗಾಭರಣ್ ನಿರ್ದೇಶನದ ಕಲ್ಲರಳಿ ಹೂವಾಗಿ ಚಿತ್ರಕ್ಕೆ ಲಭಿಸಿದರೆ, ಕಾಡಬೆಳದಿಂಗಳು ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂಬ ಹೆಗ್ಗಳಿಕೆ ಪಡೆದಿದೆ. ಈ ಹಿಂದೆ ಹಲವು ಪ್ರಶಸ್ತಿಗಳನ್ನು ದೋಚಿಕೊಂಡ ಮಾಸ್ಟರ್ ಕಿಶನ್ ನಿರ್ದೇಶನದ ಕೇರಾಫ್ ಫುಟ್ಪಾತ್ ಚಿತ್ರ ಉತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದೆ.
ಮುರಳಿ ಅಭಿನಯದ ಪ್ರಿಯನಂದನ್ ಅವರ ಮಲೆಯಾಳಿ ಚಿತ್ರ 'ಪುಲಿಜಾನ್‌ಮಮ್' ಶ್ರೇಷ್ಠಚಿತ್ರ ಪಶಸ್ತಿ ಪಡಕೊಂಡಿದ್ದರೆ, ಬಾಲಿವುಡ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಲಗೇ ರಹೋ ಮುನ್ನಾಬಾಯ್ ಶ್ರೇಷ್ಠ ಜನಪ್ರಿಯ ಚಿತ್ರ ಎಂಬ ಪ್ರಶಂಸೆಗೆ ಭಾಜನವಾಗಿದೆ.
ಟ್ರಾಫಿಕ್ ಸಿಗ್ನಲ್ ಚಿತ್ರಕ್ಕಾಗಿ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡಕೊಂಡಿದ್ದಾರೆ. ದಿವಾಕಲ್ ಬ್ಯಾನರ್ಜಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಕೋಶ್ಲಾ ಕಾ ಗೋಷ್ಲಾ ಶ್ರೇಷ್ಠ ಹಿಂದಿಚಿತ್ರ ಪ್ರಶಸ್ತಿ ಪಡೆದಿದೆ.
ತಮಿಳು ನಟಿ ಪ್ರಿಯದರ್ಶಿನಿ ಅವರು ಅಮೀರ್ ಸುಲ್ತಾನ್ ಅವರ 'ಪಾರ್ಥಿವೀರನ್' ಚಿತ್ರಕ್ಕಾಗಿ ಶ್ರೇಷ್ಠ ನಟಿ ಹಾಗೂ ಬೆಂಗಾಲಿ ನಟ ಸೌಮಿತ್ರ ಚಟರ್ಜಿ ಅವರು ಸುಮನ್ ಘೋಶ್ ಅವರ ಪೊಡೋಕ್ಕೇಪ್ ಚಿತ್ರದಲ್ಲಿನ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.
|