ಆರುಷಿಯನ್ನೊಳಗೊಂಡ ಅವಳಿ ಹತ್ಯೆಯು ಪೂರ್ವನಿಯೋಜಿತವಾಗಿದ್ದು, ಇದ್ದಕ್ಕಿದ್ದಂತೆಯೇ ಸಂಭವಿಸಿದ್ದಲ್ಲ ಎಂದು ಸಿಬಿಐ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಈ ಜಂಟಿ ಕೊಲೆಯು ಪೂರ್ವಯೋಜಿತವಾಗಿದ್ದು, ಎಲ್ಲಾ ಕಾರ್ಯಗಳನ್ನು ಬಹು ಎಚ್ಚರಿಕೆಯಿಂದ ಮಾಡಲಾಗಿದೆ ಎಂದು ಸಿಬಿಐನಲ್ಲಿರುವ ಉನ್ನತ ಮೂಲಗಳು ಹೇಳಿವೆ.
ನೊಯ್ಡಾ ಪೊಲೀಸರ ಊಹೆಯ ಪ್ರಕಾರ, ರಾಜೇಶ್ ತಲ್ವಾರ್ ಅವರು ತನ್ನ ಪುತ್ರಿ ಆರುಷಿಯ ಹತ್ಯೆ ನಡೆಸಿದ್ದು, ಮತ್ತು ಹೇಮರಾಜ್ ಇದ್ದಕ್ಕಿದ್ದಂತೆ ಫ್ಲಾಟ್‌ನಿಂದ ಬಿದ್ದಿದ್ದರು.
ಈ ನಡುವೆ, ಈ ಅವಳಿ ಕೊಲೆಯಲ್ಲಿ ಸಂಬಂಧ ಹೊಂದಿರುವ ಆರೋಪದಲ್ಲಿ ರಾಜೇಶ್ ತಲ್ವಾರ್ ಅವರ ಕಂಪೌಂಡರ್ ಕೃಷ್ಣ ಅವರನ್ನು ಸುಳ್ಳು ಪತ್ತೇಕಾರಿ ಪರೀಕ್ಷೆಗೆ ಸಿಬಿಐ ಒಳಪಡಿಸಿದೆ.
|