ಇದೇ ಪರಿಯಲ್ಲಿ ಕಾಡಿನಿಂದ ಹುಲಿಗಳ ನಾಶ ಮುಂದುವರಿಯುತ್ತಲೇ ಹೋದಲ್ಲಿ, ಇದು ಸಹ ಡೋಡೋ ಹಕ್ಕಿಯಂತೆ ಜಗತ್ತಿನಿಂದ ಅಳಿಯುವ ಪ್ರಥಮ ಪರಭಕ್ಷಕ ಸಂಕುಲವಾಗಲಿದೆ ಎಂದು ವಿಶ್ವಬ್ಯಾಂಕು ಹೇಳಿದೆ. ಹುಲಿಗಳ ರಕ್ಷಣೆಗಾಗಿ ಹೊಸ ಜಾಗತಿಕ ಉಪಕ್ರಮಕ್ಕೆ ಸೇರಿಕೊಂಡ ವಿಶ್ವಬ್ಯಾಂಕು ಈ ಹೇಳಿಕೆ ನೀಡಿದೆ.
"ಕಾಡಿನಲ್ಲಿ ಹುಲಿಗಳ ಭವಿಷ್ಯದ ರಕ್ಷಣೆಗೆ ಮತ್ತು ಬೇಟೆಗಾರರು ಮತ್ತು ವ್ಯಾಪಾರಿಗಳಿಂದ ಇವುಗಳನ್ನು ರಕ್ಷಿಸಲು ಸುದೃಢವಾದ ನೀತಿ ಬದ್ಧತೆಯ ಅವಶ್ಯಕತೆ ಇದೆ" ಎಂದು ಅದು ಹೇಳಿದೆ. ಹುಲಿಶಿಕಾರಿ, ಮತ್ತು ಅರಣ್ಯವಿನಾಶಗಳು ಹಲಿಗಳ ಸಂತತಿ ನಾಶಕ್ಕೆ ಪ್ರಮುಖ ಕಾರಣ ಎಂದು ಪಟ್ಟಿಮಾಡಲಾಗಿದೆ.
"ಪ್ರಸ್ತುತ ಪ್ರವೃತ್ತಿ ಮುಂದುವರಿದುದೇ ಆದರೆ, ಐತಿಹಾಸಿಕ ಅವಧಿಯೊಳಗೆ ಭೂಮಿಯಿಂದ ನಾಶವಾಗಲಿರುವ ಪ್ರಥಮ ಪರಭಕ್ಷಕ ಸಂತತಿ ಹುಲಿಗಳದ್ದಾಗಲಿದೆ" ಎಂದೂ ವಿಶ್ವಬ್ಯಾಂಕು ಹೇಳಿದೆ. ವಿಶ್ವಬ್ಯಾಂಕು ಮತ್ತು ಅದರ ಪಾಲುದಾರರು ಹಣಕಾಸು ಅವಶ್ಯಕತೆಗಳನ್ನು ಪಡೆಯಲು ಮತ್ತು ಹುಲಿ ಸಂರಕ್ಷಣೆಗಾಗಿ ಹಣಕಾಸು ಸರಕಾರಿ ಮತ್ತು ಖಾಸಗಿ ವಲಯಗಳೊಂದಿಗೆ ಕಾರ್ಯನಿರ್ವಹಿಸಲು ಮುಂದಾಗಿದೆ.
ಆಹಾರ ಸರಪಳಿ ಮೇಲ್ಭಾಗದಲ್ಲಿ ವ್ಯಾಘ್ರ ಸಂಕುಲ ಇರುವ ಕಾರಣ, ಇವುಗಳ ಸಂರಕ್ಷಣೆಯು ಅರಣ್ಯ ಸಂರಕ್ಷಣೆ ಹಾಗೂ ಇವುಗಳ ಬೆಂಬಲದ ಇತರ ಬೇಟೆ ಸಂಕುಲಗಳ ರಕ್ಷಣೆಯ ಅವಶ್ಯಕತೆ ಇದೆ ಎಂದು ವಿಶ್ವಬ್ಯಾಂಕಿನ ಹೇಳಿಕೆ ತಿಳಿಸಿದೆ.
|